ರಾಜ್ಯ ಹಜ್ ಸಮಿತಿಯ ನೂತನ ಅಧ್ಯಕ್ಷರಾಗಿ ರವೂಫುದ್ದೀನ್ ಕಚೇರಿವಾಲೆ ಆಯ್ಕೆ

Update: 2021-06-24 14:42 GMT
ರವೂಫುದ್ದೀನ್ ಕಚೇರಿವಾಲೆ

ಬೆಂಗಳೂರು, ಜೂ.24: ರಾಜ್ಯ ಹಜ್ ಸಮಿತಿಯ ನೂತನ ಅಧ್ಯಕ್ಷರಾಗಿ ಬಿಜೆಪಿ ಮುಖಂಡ ರವೂಫುದ್ದೀನ್ ಕಚೇರಿವಾಲೆ ಆಯ್ಕೆಯಾಗಿದ್ದಾರೆ.

ಗುರುವಾರ ವಿಕಾಸಸೌಧದಲ್ಲಿ ನಡೆದ ರಾಜ್ಯ ಹಜ್ ಸಮಿತಿಯ ನೂತನ ಅಧ್ಯಕ್ಷರ ಚುನಾವಣೆಯಲ್ಲಿ ರವೂಫುದ್ದೀನ್ ಕಚೇರಿವಾಲೆ, ಜೆಡಿಎಸ್ ಪಕ್ಷದ ವಿಧಾನಪರಿಷತ್ ಸದಸ್ಯ ಬಿ.ಎಂ.ಫಾರೂಕ್ ವಿರುದ್ಧ ಎರಡು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಬ್ಯಾಲೆಟ್ ಪೇಪರ್ ಮೂಲಕ ನಡೆದ ಈ ಚುನಾವಣೆಯಲ್ಲಿ ರಾಜ್ಯ ಹಜ್ ಸಮಿತಿಯ ಎಲ್ಲ 14 ಸದಸ್ಯರ ಪೈಕಿ ರವೂಫುದ್ದೀನ್ ಕಚೇರಿವಾಲೆ ಪರವಾಗಿ 7 ಮತಗಳು ಹಾಗೂ ಬಿ.ಎಂ.ಫಾರೂಕ್ ಪರವಾಗಿ 5 ಮತಗಳು ಚಲಾವಣೆಗೊಂಡವು. ಕ್ರಮಬದ್ಧವಲ್ಲದ ಎರಡು ಮತಗಳನ್ನು ಅಸಿಂಧುಗೊಳಿಸಲಾಯಿತು.

ರಾಜ್ಯ ಹಜ್ ಸಮಿತಿಯ ಹಿಂದಿನ ಅಧ್ಯಕ್ಷರ ಅವಧಿಯು ಮುಕ್ತಾಯಗೊಂಡು ಒಂದೂವರೆ ವರ್ಷ ಕಳೆದಿತ್ತು. ಆದರೆ, ಸಮಿತಿಗೆ ನೂತನ ಅಧ್ಯಕ್ಷರ ಆಯ್ಕೆಯಾಗದ ಹಿನ್ನೆಲೆಯಲ್ಲಿ ಕೆಲವು ಸದಸ್ಯರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಅದರಂತೆ, ನ್ಯಾಯಾಲಯದ ಆದೇಶದಂತೆ ಇವತ್ತು ಚುನಾವಣೆ ನಡೆಸಲಾಯಿತು.

ರಾಜ್ಯ ಸರಕಾರದ ಉಪ ಕಾರ್ಯದರ್ಶಿ ಮುಖ್ತಾರ್ ಪಾಷ ಅವರ ಸಕ್ಷಮದಲ್ಲಿ, ರಾಜ್ಯ ಹಜ್ ಸಮಿತಿಯ ಕಾರ್ಯನಿರ್ವಾಹಕ ಅಧಿಕಾರಿ ಸರ್ಫರಾಝ್ ಖಾನ್ ಈ ಚುನಾವಣೆಯ ಚುನಾವಣಾಧಿಕಾರಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News