ಕಗ್ಗೋಡ್ಲು ಗೋಹತ್ಯೆ ಪ್ರಕರಣ: ಓರ್ವನ ಬಂಧನ
Update: 2021-06-24 22:33 IST
ಮಡಿಕೇರಿ,ಜೂ.24: ಕಗ್ಗೋಡ್ಲುವಿನ ಕಾಫಿ ಎಸ್ಟೇಟ್ ಒಳಭಾಗ ಹಸುವನ್ನು ಗುಂಡು ಹೊಡೆದು ಮಾಂಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ಗ್ರಾಮಾಂತರ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ನಾಪೋಕ್ಲು ಕೊಳಕೇರಿ ಗ್ರಾಮದ ಆಶಿಕ್(26) ಎಂಬಾತನೇ ಬಂಧಿತ ಆರೋಪಿಯಾಗಿದ್ದು, ಇತರ ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರೆದಿದೆ. ಪೊಲೀಸರು ಸ್ಥಳ ಮಹಜರು ನಡೆಸುತ್ತಿದ್ದ ಸಂದರ್ಭ ಒಂದು ಕಾರು ಕೂಡ ಪತ್ತೆಯಾಗಿದ್ದು, ಅದರ ಬಗ್ಗೆಯೂ ತನಿಖೆ ಮುಂದುವರೆಸಲಾಗಿದೆ