×
Ad

ಶಾಸಕ ಸ್ಥಾನಕ್ಕೆ ರಾಜೀನಾಮೆ ಬಗ್ಗೆ ಮುಂಬೈನಲ್ಲಿ ತೀರ್ಮಾನ ಮಾಡುತ್ತೇನೆ: ರಮೇಶ್ ಜಾರಕಿಹೊಳಿ

Update: 2021-06-25 15:55 IST

ಮೈಸೂರು,ಜೂ.25: ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಮುಂಬೈನಲ್ಲಿ ತೀರ್ಮಾನ ಮಾಡುತ್ತೇನೆ ಎಂದು ಶಾಸಕ ರಮೇಶ್ ಜಾರಕಿಹೊಳಿ ತಿಳಿಸಿದರು.

ಸುತ್ತೂರು ಶ್ರೀಗಳನ್ನು ಭೇಟಿ ಮಾಡಲು ಶುಕ್ರವಾರ ವಿಶೇಷ ವಿಮಾನದ ಮೂಲಕ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಸಹೋದರ ಲಖನ್ ಜಾರಕಿಹೊಳಿ ಜೊತೆಗೆ ಆಗಮಿಸಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

''ನಾನು ಇಲ್ಲಿಗೆ ಬಂದಿರುವುದು ಸ್ವಾಮೀಜಿಗಳನ್ನು ಭೇಟಿಯಾಗಲು, ರಾಜಕೀಯ ಮಾತನಾಡಲು ಅಲ್ಲ. ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರ ಮುಂಬೈನಲ್ಲಿ ತೀರ್ಮಾನ ಆಗಲಿದೆ. ತನ್ನನ್ನು ಭೇಟಿ ಮಾಡಿ ಎಂದು ಸಿಎಂ ಹೇಳಿರುವುದು ನನಗೆ ಗೊತ್ತಿಲ್ಲ ಎಂದು ಹೇಳಿದರು.

ನಾನು ಮುಂಬೈಗೆ ಹೋಗಿರುವುದು ರಾಜಕೀಯ ಇರಬಹುದು. ಆದರೆ ಇಲ್ಲಿಗೆ ಬಂದಿರುವುದು ಸುತ್ತೂರು ಶ್ರೀಗಳ ಪೂರ್ವಾಶ್ರಮದ ತಾಯಿ ನಿಧರಾಗಿರುವುದರಿಂದ ಸ್ವಾಮೀಜಿಗಳನ್ನು ಭೇಟಿ ಮಾಡಿ ಮಾತನಾಡಲು ಬಂದಿದ್ದೇನೆ. ಯಾವುದೇ ರಾಜಕೀಯ ಮಾಡಲು ಅಲ್ಲ ಎಂದು ಹೇಳಿದರು.


ಸರ್ಕಾರವನ್ನು ತಂದ ನಾನು ಮಂತ್ರಿ ಸ್ಥಾನ ಕೇಳುತ್ತೇನೆ. ನಾನು ಮಂತ್ರಿ ಸ್ಥಾನಕ್ಕಾಗಿ ಸ್ವಾಮೀಜಿಯನ್ನು ಭೇಟಿ ಮಾಡುತ್ತಿಲ್ಲ. ಸ್ವಾಮೀಜಿಯವರನ್ನು ಭೇಟಿಯಾದ ಬಳಿಕ ಮಾತನಾಡುತ್ತೇನೆ. ನಾನು ಇಲ್ಲಿ ಏನೂ ಮಾತನಾಡುವುದಿಲ್ಲ, ಮುಂಬೈಗೆ ಹೋಗಿ ರಾಜಕೀಯದ ಬಗ್ಗೆ ಮಾತನಾಡುತ್ತೇನೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News