×
Ad

ಕಗ್ಗೋಡ್ಲುವಿನಲ್ಲಿ ಗೋಹತ್ಯೆ ಪ್ರಕರಣ: ಮತ್ತೆ ನಾಲ್ವರು ಆರೋಪಿಗಳ ಬಂಧನ

Update: 2021-06-27 18:49 IST

ಮಡಿಕೇರಿ, ಜೂ.27: ಇತ್ತೀಚೆಗೆ ಕಗ್ಗೋಡ್ಲುವಿನಲ್ಲಿ ನಡೆದ ಗೋಹತ್ಯೆಯ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಉಳಿದ ನಾಲ್ವರು ಆರೋಪಿಗಳನ್ನು ಮಡಿಕೇರಿ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಮಹಮ್ಮದ್ ಜಾಬೀರ್ ಕೆ.ಎಂ(27), ಟಿ.ಅಬ್ದುಲ್ ಸಲಾಂ(45), ಸಿಯಾಬ್ ಪಿ.ಎ (29) ಹಾಗೂ ಮಹಮ್ಮದ್ ಪಿ.ಎ (26)ಬಂಧಿತ ಆರೋಪಿಗಳು.

ಕೃತ್ಯಕ್ಕೆ ಬಳಸಿದ ಕೋವಿ, ಚಾಕು ಹಾಗೂ ಎರಡು ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಾಲ್ವರ ಬಂಧನದ ಮೂಲಕ ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಬಂಧಿಸಿದಂತಾಗಿದೆ. ಈ ಹಿಂದೆ ಆಶಿಕ್ ಹಾಗೂ ಮಹಮ್ಮದ್ ರಿಯಾಝ್ ಎಂಬಾತನನ್ನು ಬಂಧಿಸಲಾಗಿತ್ತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ ನಿರ್ದೇಶನದಂತೆ ಮಡಿಕೇರಿ ಉಪ ವಿಭಾಗದ ಪೊಲೀಸ್ ಅಧೀಕ್ಷಕ ದಿನೇಶ್ ಕುಮಾರ್ ಮಾರ್ಗದರ್ಶನದಲ್ಲಿ ಗ್ರಾಮಾಂತರ ಠಾಣಾ ವೃತ್ತ ನಿರೀಕ್ಷಕ ರವಿಕಿರಣ್, ಅಪರಾಧ ವಿಭಾಗದ ಉಪ ನಿರೀಕ್ಷಕ ಸದಾಶಿವ, ಸಿಬ್ಬಂದಿಗಳಾದ ದಿನೇಶ್, ಸಜನ್, ಪುಷ್ಪ ಮೂರ್ತಿ, ರವಿ, ಮಂಜು ಹಾಗೂ ಪ್ರವೀಣ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News