×
Ad

ಯಲಬುರ್ಗಾ: ಮದ್ಯ ಮುಕ್ತ ಗ್ರಾಮಗಳಲ್ಲಿ ಮಸ್‌ದರ್ ವತಿಯಿಂದ 'ಕಟ್ಟೆಹರಟೆ'

Update: 2021-06-27 20:16 IST

ಯಲಬುರ್ಗಾ: ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮಂಡಲಮರಿ ಹಾಗೂ ತರಲಕಟ್ಟಿ ಗ್ರಾಮದ ಮುಖಂಡರ ನೇತೃತ್ವದಲ್ಲಿ ಕಳೆದ ಎರಡು ತಿಂಗಳ ಹಿಂದೆ ಮದ್ಯ ಮುಕ್ತ ಗ್ರಾಮವೆಂದು ಘೋಷಣೆ ಮಾಡಿದ್ದು, ಈ ಗ್ರಾಮದಲ್ಲಿ ಮಾದಕ ದ್ರವ್ಯ ವಿರೋಧಿ ದಿನದ ಪ್ರಯುಕ್ತ ಮಸ್‌ದರ್ ಎಜ್ಯು ಆಂಡ್ ಚಾರಿಟಿ ವತಿಯಿಂದ ಕಟ್ಟೆ ಹರಟೆ ಕಾರ್ಯಕ್ರಮ ನಡೆಯಿತು. 

ಸಂಪೂರ್ಣ ಮದ್ಯ ಮುಕ್ತ ಗ್ರಾಮವೆಂದು ಘೋಷಣೆ ಮಾಡಿರುವ ಈ ಹಳ್ಳಿಗಳಿಗೆ ಅಭಿನಂದನೆ ಸಲ್ಲಿಸಿದ ಮಸ್‌ದರ್ ಎಜ್ಯು ಆಂಡ್ ಚಾರಿಟಿ ಇದರ ಪ್ರಧಾನ ಕಾರ್ಯದರ್ಶಿ ಹಾಫಿಝ್ ಸುಫ್ಯಾನ್ ಸಖಾಫಿ ಅವರು ಗ್ರಾಮದ ಮುಖಂಡರೊಂದಿಗೆ ಮಾತುಕತೆಗೆ ನೇತೃತ್ವ ವಹಿಸಿದರು. 

ಕಳೆದ ಎರಡು ತಿಂಗಳ ಹಿಂದೆ ಮಾಡಿದ ಈ ತೀರ್ಮಾನದಿಂದ ಊರಿನಲ್ಲಿ ಬಹಳಷ್ಟು ಬದಲಾವಣೆ ಉಂಟಾಗಿದ್ದು ಮುಖ್ಯವಾಗಿ ಮಹಿಳೆಯರು ಮತ್ತು ಮಕ್ಕಳು ನಿಟ್ಟುಸಿರು ಬಿಟ್ಟಿದ್ದಾರೆ ಎಂದು ಗ್ರಾಮಸ್ಥರು ಅಭಿಪ್ರಾಯ ಪಟ್ಟರು. 

ದುಡಿದ ಹಣ ಕೂಡ ಈಗ ಉಳಿಯುತ್ತಿದ್ದು ಮಕ್ಕಳ ಶಿಕ್ಷಣ ಹಾಗೂ ಕುಟುಂಬದ ನಿರ್ವಹಣೆ ಕೂಡ ಸುಲಭವಾಗಿದೆ. ಪ್ರತಿ ಗ್ರಾಮಗಳೂ ಇದನ್ನು ಮಾದರಿ ಮಾಡಿ ಈ ಪಿಡುಗಿಗೆ ಅಂತ್ಯ ಹಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News