ಕಾಸರಗೋಡಿನ ಗ್ರಾಮಗಳ ಹೆಸರು ಬದಲಾವಣೆ ವಿಚಾರ ಗೃಹ ಸಚಿವರ ಗಮನಕ್ಕೆ ತರುತ್ತೇನೆ: ಪ್ರಹ್ಲಾದ್ ಜೋಶಿ

Update: 2021-06-28 12:20 GMT

ಹುಬ್ಬಳ್ಳಿ, ಜೂ. 28: `ಕರ್ನಾಟಕ ರಾಜ್ಯದ ಗಡಿಭಾಗ ಕಾಸರಗೋಡು ಜಿಲ್ಲೆಯ ಗ್ರಾಮಗಳ ಕನ್ನಡ ಹೆಸರಿನ ಬದಲಾವಣೆ ಸಂಬಂಧ ಹೆಚ್ಚಿನ ಮಾಹಿತಿ ಸಂಗ್ರಹಿಸಿ ಕೇಂದ್ರ ಗೃಹ ಸಚಿವರ ಅಮಿತ್ ಶಾ ಅವರ ಗಮನಕ್ಕೆ ತರಲಾಗುವುದು' ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಇಂದಿಲ್ಲಿ ತಿಳಿಸಿದ್ದಾರೆ.

ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಕನ್ನಡದ ಹೆಸರುಗಳ ಬದಲಾವಣೆ ಕುರಿತು ಕೇಂದ್ರ ಗೃಹ ಸಚಿವರ ಗಮನಕ್ಕೆ ತಂದರೆ, ಅವರು ಕೇರಳ ರಾಜ್ಯ ಸರಕಾರಕ್ಕೆ ಸೂಕ್ತ ನಿರ್ದೇಶನ ನೀಡಲಿದ್ದಾರೆ. ಕನ್ನಡದ ಹೆಸರುಗಳನ್ನು ಬದಲಾವಣೆಗೆ ಮುಂದಾಗಿರುವ ಕೇರಳ ಸರಕಾರದ ಕ್ರಮ ಸರಿಯಲ್ಲ' ಎಂದು ಆಕ್ಷೇಪಿಸಿದರು.

`ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರಕಾರ ಅಸ್ತಿತ್ವದಲ್ಲಿದೆ. ಹೀಗಾಗಿ ಅಧಿಕಾರಕ್ಕಾಗಿ ಮುಖಂಡರ ಮಧ್ಯೆ ಪೈಪೋಟಿ ಸಹಜ. ಆದರೆ, ಅಧಿಕಾರವಿಲ್ಲದೆ ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ತಿಕ್ಕಾಟ ನಡೆದಿರುವುದು ಹಾಸ್ಯಾಸ್ಪದ' ಎಂದು ಪ್ರಹ್ಲಾದ್ ಜೋಶಿ ಲೇವಡಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News