ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಜೂ.30ಕ್ಕೆ ರಾಜ್ಯಾದ್ಯಂತ ಪ್ರತಿಭಟನೆ
Update: 2021-06-28 18:41 IST
ಬೆಂಗಳೂರು, ಜೂ. 28: `ದಲಿತರ ಮೇಲಿನ ದೌರ್ಜನ್ಯ ತಡೆಯದ-ಅವರಿಗೆ ರಕ್ಷಣೆ ನೀಡದ ರಾಜ್ಯ ಬಿಜೆಪಿ ಸರಕಾರದ ನೀತಿಯನ್ನು ಖಂಡಿಸಿ' ದಲಿತ ಹಕ್ಕುಗಳ ಸಮಿತಿ(ಡಿಎಚ್‍ಎಸ್) ಜೂ.30ರಂದು ರಾಜ್ಯಾದ್ಯಂತ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.
ಕೊಪ್ಪಳದ ಬರಗೂರು, ವಿಜಯಪುರದ ದೇವರ ಹಿಪ್ಪರಗಿ, ಸಲದಹಳ್ಳಿಯ ಮರ್ಯಾದೆ ಹತ್ಯೆ, ಕೊಪ್ಪಳ ಜಿಲ್ಲೆಯಲ್ಲಿ ಕ್ಷೌರ ನಿರಾಕರಣೆ, ಚಿಕ್ಕಮಗಳೂರು ಜಿಲ್ಲೆಯ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ದಲಿತ ಯುವಕ ಮೇಲೆ ದೌರ್ಜನ್ಯ ಸಹಿತ ನೂರಾರು ದೌರ್ಜನ್ಯ ನಡೆಯುತ್ತಿದ್ದರೂ ಕೋವಿಡ್ ಕಾಲದಲ್ಲೂ ಜಾತಿ ತಾರತಮ್ಯ ತಡೆಗಟ್ಟಲು ಆಗ್ರಹಿಸಿ ಹೋರಾಟ ನಡೆಸಲಾಗುತ್ತಿದೆ ಎಂದು ಸಮಿತಿ ರಾಜ್ಯ ಸಂಚಾಲಕ ಗೋಪಾಲಕೃಷ್ಣ ಹರಳಹಳ್ಳಿ ತಿಳಿಸಿದ್ದಾರೆ.