ಡಿಸೆಂಬರ್ ನಲ್ಲಿ ಬಾಹ್ಯಾಕಾಶಕ್ಕೆ ಮಾನವ ರಹಿತ ರಾಕೆಟ್ ಉಡಾವಣೆ: ಇಸ್ರೋ

Update: 2021-06-28 17:02 GMT

ಬೆಂಗಳೂರು, ಜೂ.28: ಡಿಸೆಂಬರ್ ನಲ್ಲಿ ಬಾಹ್ಯಾಕಾಶಕ್ಕೆ ಮಾನವ ರಹಿತ ರಾಕೆಟ್ ಉಡಾವಣೆ ಮಾಡಲು ಇಸ್ರೋ ಸಮಯ ನಿಗದಿಪಡಿಸಿದೆ.

ಬಹುನಿರೀಕ್ಷಿತ ಮಾನವ ಸಹಿತ ಗಗನಯಾನಕ್ಕೆ ತಯಾರಿ ಮಾಡಿಕೊಂಡಿದ್ದ ಇಸ್ರೋ ಇತ್ತೀಚೆಗೆ ಕಾಣಿಸಿಕೊಂಡ ಕೊರೋನ ಸೋಂಕಿನಿಂದ ಎದುರಾದ ತೊಂದರೆಗಳಿಂದ ತನ್ನ ಉದ್ದೇಶಿನ ಮಾನವ ಸಹಿತ ರಾಕೆಟ್ ಉಡಾವಣೆಯನ್ನು ಮುಂದೂಡಿದೆ.

ಉದ್ದೇಶಿತ ಯೋಜನೆಯ ಅಂಗವಾಗಿ ಬರುವ ಡಿಸೆಂಬರ್ ನಲ್ಲಿ ಬಾಹ್ಯಾಕಾಶಕ್ಕೆ ಎರಡು ಮಾನವರಹಿತ ರಾಕೆಟ್ ಉಡಾವಣೆ ಮಾಡಲು ತೀರ್ಮಾನಿಸಿದೆ ಎಂದು ಇಸ್ರೋ ತಿಳಿಸಿದೆ.

ಕೊರೋನ ಮೊದಲನೆ ಹಾಗೂ ಎರಡನೆ ಅಲೆಯಿಂದಾಗಿ ನಮ್ಮ ಸಂಸ್ಥೆಯ ಉದ್ದೇಶಿತ ಗಗನಯಾನ ಯೋಜನೆಗೆ ಹಿನ್ನಡೆಯಾಗಿದೆ ಎಂದು ವಿಜ್ಞಾನಿಗಳು ಸ್ಪಷ್ಟನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News