ಮಾಲ್‍ಗಳ ಪ್ರಾರಂಭಕ್ಕೆ ಅನುಮತಿ ನೀಡಲು ಮುಖ್ಯಮಂತ್ರಿಗೆ ಮನವಿ
Update: 2021-06-29 22:41 IST
ಬೆಂಗಳೂರು, ಜೂ.29: ಲಾಕ್‍ಡೌನ್ ಹಿನ್ನೆಲೆಯಲ್ಲಿ ಬಂದ್ ಆಗಿರುವ ಮಾಲ್‍ಗಳನ್ನು ಮುಂದಿನ ವಾರದಿಂದ ತೆರೆಯಲು ಅವಕಾಶ ಮಾಡಿಕೊಡುವಂತೆ ಶಾಪಿಂಗ್ ಸೆಂಟರ್ ಅಸೋಸಿಯೇಷನ್ ಆಫ್ ಇಂಡಿಯಾ ಮುಖ್ಯಮಂತ್ರಿ ಯಡಿಯೂರಪ್ಪನವರಲ್ಲಿ ಮನವಿ ಮಾಡಿದೆ.
ಮಂಗಳವಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಅವರ ಗೃಹ ಕಚೇರಿ ಕೃಷ್ಣಾದಲ್ಲಿಂದು ಭೇಟಿ ಮಾಡಿದ್ದ ಶಾಪಿಂಗ್ ಸೆಂಟರ್ ಅಸೋಸಿಯೇಷನ್ ಆಫ್ ಇಂಡಿಯಾದ ಸದಸ್ಯರು, ಕೋವಿಡ್ ಕಾರಣದಿಂದ ಬಂದ್ ಆಗಿರುವ ಮಾಲ್‍ಗಳನ್ನು ಮುಂದಿನ ವಾರದಿಂದ ತೆರೆಯಲು ಅನುಮತಿ ನೀಡಿ ಎಂದು ಮನವಿ ಮಾಡಿದರು.
ಕಳೆದ 2 ತಿಂಗಳಿಂದ ಶಾಪಿಂಗ್ ಮಾಲ್‍ಗಳು ತೆರೆದಿಲ್ಲ. ಇದರಿಂದ ವ್ಯಾಪಾರ ವಹಿವಾಟು ಇಲ್ಲದೆ ಆರ್ಥಿಕ ತೊಂದರೆಗೆ ಸಿಲುಕಿದ್ದೇವೆ. ಹೀಗಾಗಿ, ಆಸ್ತಿ ತೆರಿಗೆ, ಬಾಡಿಗೆ ಹಾಗೂ ವಿದ್ಯುತ್ ಬಿಲ್ ಮನ್ನಾ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ.