×
Ad

ಸೋಮವಾರಪೇಟೆ: ಆಟವಾಡುತ್ತಿದ್ದಾಗ ಕೊರಳಿಗೆ ಜೋಕಾಲಿ ಸುತ್ತಿ ಇಬ್ಬರು ಮಕ್ಕಳು ಮೃತ್ಯು

Update: 2021-06-30 22:24 IST

ಮಡಿಕೇರಿ, ಜೂ.28: ಸೀರೆ ಬಳಸಿ ಜೋಕಾಲಿ ಆಡುತ್ತಿದ್ದ ಇಬ್ಬರು ಮಕ್ಕಳು ಅದೇ ಜೋಕಾಲಿಯಿಂದ ಜೀವ ಕಳೆದುಕೊಂಡ ಹೃದಯವಿದ್ರಾವಕ ಘಟನೆ ಸೋಮವಾರಪೇಟೆ ಪಟ್ಟಣ ಸಮೀಪದ ಗಣಗೂರು ಉಂಜಿಗನ ಹಳ್ಳಿಯಲ್ಲಿ ಬುಧವಾರ ಸಂಜೆ ನಡೆದಿದೆ.

ಗ್ರಾಮದ ನಿವಾಸಿ ಕಾರ್ಮಿಕ ರಾಜು ಹಾಗೂ ಜಯಂತಿ ಎಂಬವರ ಪುತ್ರಿ ಮಣಿಕ್ ಶಾ(14) ಹಾಗೂ ಪೂರ್ಣೆಶ್ (12) ಮೃತ ಮಕ್ಕಳು.

ಇಂದು ಸಂಜೆ ಮನೆಯಲ್ಲಿ ಇವರು ಇಬ್ಬರೇ ಇದ್ದರು. ಈ ವೇಳೆ ಜೋಕಾಲಿಯಲ್ಲಿ ಆಟವಾಡುತ್ತಿದ್ದಾಗ ಜೋಕಾಲಿ ಕೊರಳಿಗೆ ಉರುಳಾಗಿ ಸುತ್ತಿಕೊಂಡ ಪರಿಣಾಮ ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಕೆಲಸಕ್ಕೆ ತೆರಳಿದ್ದ ತಾತ ರಾಮಣ್ಣ ಮನೆಗೆ ಬಂದು ನೋಡಿದಾಗ ಇಬ್ಬರೂ ನೇಣು ಬಿಗಿದ ಸ್ಥಿತಿಯಲ್ಲಿದ್ದು, ತಕ್ಷಣವೇ ಸೀರೆಯನ್ನು ಕತ್ತರಿಸಿ ಮಕ್ಕಳನ್ನು ಕೆಳಗಿಳಿಸಿದ್ದಾರೆ. ಆದರೆ ಆ ವೇಳೆಗೆ ಇಬ್ಬರೂ ಮೃತಪಟ್ಟಿದ್ದಾರೆನ್ನಲಾಗಿದೆ.

ಸ್ಥಳಕ್ಕೆ ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್, ಸಬ್ ಇನ್‍ಸ್ಪೆಕ್ಟರ್ ಶ್ರೀಧರ್ ಹಾಗೂ ಸಿಬ್ಬಂದಿಗಳು ತೆರಳಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News