×
Ad

ಮೈಸೂರಿಗೆ ಆಗಮಿಸಿದ ಸಿದ್ದರಾಮಯ್ಯ: ರಾಜ್ಯದ ಹುಲಿ, ಮೈಸೂರು ಹುಲಿ ಎಂದು ಘೋಷಣೆ ಕೂಗಿದ ಅಭಿಮಾನಿಗಳು

Update: 2021-06-30 22:35 IST

ಮೈಸೂರು,ಜೂ.30: ಮೈಸೂರಿಗೆ ಆಗಮಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರಿಗೆ ರಾಜ್ಯದ ಹುಲಿ, ರಾಜಕೀಯ ಹುಲಿ, ಮೈಸೂರು ಹುಲಿ, ಚಾಮುಂಡೇಶ್ವರಿ ವರಪುತ್ರ ಎಂದು ಘೋಷಣೆ ಕೂಗಿ ಅಭಿಮಾನಿಗಳು ಸ್ವಾಗತ ಕೋರಿದರು.

ನಾಳೆಯಿಂದ ತವರು ಕ್ಷೇತ್ರದಲ್ಲಿ ಪ್ರವಾಸ ಹಮ್ಮಿಕೊಂಡಿರುವ ಸಿದ್ದರಾಮಯ್ಯ ಅವರು ಬುಧವಾರ ಮೈಸೂರಿಗೆ ಆಗಮಿಸಿದರು.

ಕೊಲಂಬಿಯಾ ಏಷಿಯಾ ಆಸ್ಪತ್ರೆ ಬಳಿಯ ಮೈಸೂರು-ಬೆಂಗಳೂರು ಟೋಲ್ ಗೇಟ್ ನಲ್ಲಿ ಅಭಿಮಾನಿಗಳು ಹಾರ ಶಾಲು ಹಾಕಿ ಬರಮಾಡಿಕೊಂಡರು.

ಮುಂದಿನ ಮುಖ್ಯಮಂತ್ರಿ ಘೋಷಣೆ ಕೂಗದಂತೆ ಸಿದ್ದರಾಮಯ್ಯ ಕಟ್ಟುನಿಟ್ಟಿನ ಸೂಚನೆ ನೀಡಿದ ಹಿನ್ನಲೆಯಲ್ಲಿ ಅವರ ಅಭಿಮಾನಿಗಳು ಯಾರೂ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬ ಘೋಷಣೆ ಕೂಗಲಿಲ್ಲ.

ಮುಂದಿನ ಮುಖ್ಯಮಂತ್ರಿ ಎಂಬ ಘೋಷಣೆ ಕೂಗಲು ಹಿಂದೇಟು ಹಾಕಿದ ಅಭಿಮಾನಿಗಳು ಚಾಮುಂಡೇಶ್ವರಿ ವರಪುತ್ರ, ರಾಜ್ಯದ ಹುಲಿ, ರಾಜಕೀಯ ಹುಲಿ, ಮೈಸೂರು ಹುಲಿ ಎಂದು ಘೋಷಣೆ ಕೂಗಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News