ಸಿದ್ದಾಪುರ: ಒಂದೇ ದಿನದ ಅಂತರದಲ್ಲಿ ಪತಿ-ಪತ್ನಿ ನಿಧನ

Update: 2021-07-01 17:49 GMT

ಸಿದ್ದಾಪುರ, ಜು.1: ಒಂದೇ ದಿನದ ಅಂತರದಲ್ಲಿ ಪತಿ, ಪತ್ನಿ ನಿಧನರಾದ ಪ್ರಕರಣ ಸಿದ್ದಾಪುರದಲ್ಲಿ ನಡೆದಿದೆ.

ಸ್ಥಳೀಯ ನಿವಾಸಿ ಗುಜರಿ ವ್ಯಾಪಾರಿ ಕೆ.ನಝೀರ್ (84) ಹಾಗೂ ಜಮಾಲ್ಬೀ (75) ನಿಧನ ಹೊಂದಿದ ದಂಪತಿ.

ಕಳೆದ ಕೆಲವು ತಿಂಗಳುಗಳಿಂದ ಇಬ್ಬರು ಅನಾರೋಗ್ಯದಿಂದ ಬಳಲುತ್ತಿದ್ದರು. ಜೂ.30 ರಂದು ಕೆ.ನಝೀರ್ ಹಾಗೂ ಜು.1 ರಂದು ಜಮಾಲ್ಬೀ ನಿಧನರಾದರು.

ಮೃತ ದಂಪತಿ 6 ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News