'ಸೂಚನೆ ಪಾಲಿಸದಿದ್ದರೆ ಸ್ವತಂತ್ರ ಏಜೆನ್ಸಿ ರಚನೆ': ಫುಟ್‍ಪಾತ್ ಒತ್ತುವರಿ ತೆರವಿಗೆ ಹೈಕೋರ್ಟ್ ಸೂಚನೆ

Update: 2021-07-01 18:09 GMT

ಬೆಂಗಳೂರು, ಜು.1: ಉತ್ತಮ ಸ್ಥಿತಿಯಲ್ಲಿ ಫುಟ್‍ಪಾತ್ ಹೊಂದುವುದು ಜನರ ಹಕ್ಕು, ಫುಟ್‍ಪಾತ್‍ಗಳ ಒತ್ತುವರಿ ಮುಕ್ತಗೊಳಿಸಬೇಕು. ಬಿಬಿಎಂಪಿ ಮತ್ತು ಸರಕಾರ ನ್ಯಾಯಾಲಯದ ಸೂಚನೆ ಪಾಲಿಸದಿದ್ದರೆ ಸ್ವತಂತ್ರ ಏಜೆನ್ಸಿ ರಚಿಸಬೇಕಾಗುತ್ತದೆ ಎಂದು ಹೈಕೋರ್ಟ್ ಎಚ್ಚರಿಸಿದೆ.

ಈ ಕುರಿತು ವಕೀಲ ರಮೇಶ್ ನಾಯಕ್ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಹೈಕೋರ್ಟ್ ನ್ಯಾಯಪೀಠದಲ್ಲಿ ನಡೆಯಿತು.

ಫುಟ್‍ಪಾತ್‍ಗಳಲ್ಲಿ ಒತ್ತುವರಿ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಸರಕಾರದ ಮುಖ್ಯ ಕಾರ್ಯದರ್ಶಿ ಈ ಬಗ್ಗೆ ಸುತ್ತೋಲೆ ಹೊರಡಿಸಿದ್ದಾರೆ. ಅರಿವು ಮೂಡಿಸಲು ಬಿಬಿಎಂಪಿ ಕೂಡ ಜಾಹೀರಾತು ನೀಡಿದೆ ಎಂದು ನ್ಯಾಯಪೀಠಕ್ಕೆ ಸರಕಾರದ ಪರ ವಕೀಲರು ಮಾಹಿತಿ ನೀಡಿದರು.

ಪಾದಚಾರಿ ಮಾರ್ಗಗಳ ಮೇಲೆ ವಾಹನ ನಿಲುಗಡೆ ಮಾಡಬಾರದು ಎಂದು ಸ್ಪಷ್ಟ ಆದೇಶ ನೀಡಿದ್ದರೂ ಸಹ ಹಲವೆಡೆ ಫುಟ್‍ಪಾತ್ ಮೇಲೆ ವಾಹನಗಳನ್ನು ನಿಲ್ಲಿಸುತ್ತಿರುವ ಪ್ರವೃತ್ತಿ ಮುಂದುವರಿದಿದೆ ಎಂದು ನ್ಯಾಯಪೀಠವು ತೀವ್ರ ಅಸಮಾಧಾನ ವ್ಯಕ್ತಪಡಿಸಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News