ಜು.5ರಿಂದ ಚಂದನ ವಾಹಿನಿಯಲ್ಲಿ 1ರಿಂದ 10ನೇ ತರಗತಿ ಪಾಠಗಳು ಪ್ರಸಾರ
ಬೆಂಗಳೂರು, ಜು.2: ಕೋವಿಡ್-19 ಹಿನ್ನೆಲೆಯಲ್ಲಿ 2021-22ನೇ ಸಾಲಿನಲ್ಲಿ ಶಾಲೆಗಳು ನಿಗದಿತ ಸಮಯಕ್ಕೆ ಪ್ರಾರಂಭವಾಗದಿರುವುದರಿಂದ ಕಳೆದ ಸಾಲಿನಂತೆ 1ರಿಂದ 10ನೆ ತರಗತಿವರೆಗೆ ದೂರದರ್ಶನ ಚಂದನ ವಾಹಿನಿಯ ಮೂಲಕ ಜು.5ರಿಂದ ವೀಡಿಯೋ ಪಾಠಗಳನ್ನು ಪ್ರಸಾರ ಮಾಡಲು ಕ್ರಮ ವಹಿಸಲಾಗಿದೆ ಎಂದು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ತಿಳಿಸಿದೆ.
ಈ ಕುರಿತು ಪ್ರಕಟನೆ ಹೊರಡಿಸಿರುವ ಇಲಾಖೆ ರಾಜ್ಯದ ಎಲ್ಲ ವಿದ್ಯಾರ್ಥಿಗಳು ಸದರಿ ಕಾರ್ಯಕ್ರಮವನ್ನು ವೀಕ್ಷಿಸಿ ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಹಾಗೂ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಶಿಕ್ಷಕರು, ಪೋಷಕರು ಹಾಗೂ ಸಮುದಾಯ ಸಹಕರಿಸಬೇಕೆಂದು ಮನವಿ ಮಾಡಿದೆ.
1ರಿಂದ 3ನೇ ತರಗತಿ: ಪ್ರತಿ ರವಿವಾರ ಮಧ್ಯಾಹ್ನ 12.30ರಿಂದ 2ರವರೆಗೆ ನಲಿಕಲಿ ಕಾರ್ಯಕ್ರಮ
4ನೇ ತರಗತಿ: ಶನಿವಾರ ಬೆಳಗ್ಗೆ 10ರಿಂದ 10.30ರವರೆಗೆ ಕನ್ನಡ, 10.30ರಿಂದ 11ರವರೆಗೆ ಗಣಿತ ಹಾಗೂ ರವಿವಾರ 11.30ರಿಂದ 12ರವರೆಗೆ ಪರಿಸರ ವಿಜ್ಞಾನ, ಮಧ್ಯಾಹ್ನ 12ರಿಂದ 12.30ರವರೆಗೆ ಇಂಗ್ಲಿಷ್.
5ನೇ ತರಗತಿ: ಶನಿವಾರ ಬೆಳಗ್ಗೆ 9ರಿಂದ 9.30ರವರೆಗೆ ಕನ್ನಡ, 9.30ರಿಂದ 10ರವರೆಗೆ ಗಣಿತ ಹಾಗೂ ರವಿವಾರ ಬೆಳಗ್ಗೆ 10ರಿಂದ 10.30ವರೆಗೆ ಪರಿಸರ ವಿಜ್ಞಾನ, 10.30ರಿಂದ 11ರವರೆಗೆ ಇಂಗ್ಲಿಷ್ ತರಗತಿ ಇರುತ್ತದೆ.
6ನೇ ತರಗತಿ(ಕನ್ನಡ ಮಾಧ್ಯಮ): ಪ್ರತಿ ಗುರುವಾರ ಬೆಳಗ್ಗೆ 10.30ರಿಂದ 11ರವರೆಗೆ ಕನ್ನಡ, 11.30ರಿಂದ 12ವರೆಗೆ ಇಂಗ್ಲಿಷ್, ಮಧ್ಯಾಹ್ನ 1.30ರಿಂದ 2ರವರೆಗೆ ಗಣಿತ ಹಾಗೂ ಇಂಗ್ಲಿಷ್ ಮಾಧ್ಯಮ ವಿದ್ಯಾರ್ಥಿಗಳಿಗೆ ಮಧ್ಯಾಹ್ನ 3ರಿಂದ 3.30ರವರೆಗೆ ಗಣಿತ, 3.30ರಿಂದ 4ರವರೆಗೆ ವಿಜ್ಞಾನ ತರಗತಿಗಳಿರುತ್ತವೆ.
ಶುಕ್ರವಾರ(ಕನ್ನಡ ಮಾಧ್ಯಮ): ಬೆಳಗ್ಗೆ 10.30ರಿಂದ 11ರವರೆಗೆ ಹಿಂದಿ, 11.30ರಿಂದ 12ರವರೆಗೆ ವಿಜ್ಞಾನ, ಮಧ್ಯಾಹ್ನ 1.30ರಿಂದ 2ರವರೆಗೆ ಸಮಾಜ ವಿಜ್ಞಾನ ಹಾಗೂ ಇಂಗ್ಲಿಷ್ ಮಾಧ್ಯಮ ವಿದ್ಯಾರ್ಥಿಗಳಿಗೆ ಮಧ್ಯಾಹ್ನ 3.30ರಿಂದ 4ರವರೆಗೆ ಸಮಾಜ ವಿಜ್ಞಾನ ತರಗತಿ ಇರುತ್ತದೆ.
7ನೇ ತರಗತಿ(ಕನ್ನಡ ಮಾಧ್ಯಮ): ಪ್ರತಿ ಗುರುವಾರ ಬೆಳಗ್ಗೆ 9ರಿಂದ 9.30ರವರೆಗೆ ಇಂಗ್ಲಿಷ್, 9.30ರಿಂದ 10ರವರೆಗೆ ಗಣಿತ, 10ರಿಂದ 10.30ರವರೆಗೆ ಕನ್ನಡ ಹಾಗೂ ಅದೇ ದಿನ ಇಂಗ್ಲಿಷ್ ಮಾಧ್ಯಮ ವಿದ್ಯಾರ್ಥಿಗಳಿಗೆ ಮಧ್ಯಾಹ್ನ 2ರಿಂದ 2.30ರವರೆಗೆ ಗಣಿತ, 2.30ರಿಂದ 3ರವರೆಗೆ ವಿಜ್ಞಾನ ಹಾಗೂ ಉರ್ದು ಮಾಧ್ಯಮ ವಿದ್ಯಾರ್ಥಿಗಳಿಗೆ ಸಂಜೆ 4ರಿಂದ 4.30ರವರೆಗೆ ಗಣಿತ ತರಗತಿ ಇರುತ್ತದೆ.
ಶುಕ್ರವಾರ ಬೆಳಗ್ಗೆ 9ರಿಂದ 9.30ರವರೆಗೆ ವಿಜ್ಞಾನ, 9.30ರಿಂದ 10ರವರೆಗೆ ಸಮಾಜ ವಿಜ್ಞಾನ, 10ರಿಂದ 10.30ರವರೆಗೆ ಹಿಂದಿ ತರಗತಿ ಹಾಗೂ ಇಂಗ್ಲಿಷ್ ಮಾಧ್ಯಮ ವಿದ್ಯಾರ್ಥಿಗಳಿಗೆ 2.30ರಿಂದ 3ರವರೆಗೆ ಸಮಾಜ ವಿಜ್ಞಾನ, ಉರ್ದು ಮಾಧ್ಯಮ ವಿದ್ಯಾರ್ಥಿಗಳಿಗೆ ಸಂಜೆ 4ರಿಂದ 4.30ರವರೆಗೆ ವಿಜ್ಞಾನ ತರಗತಿ ಇರುತ್ತದೆ.
8ನೇ ತರಗತಿ: ಪ್ರತಿ ಸೋಮವಾರ 10ರಿಂದ 10.30ರವರೆಗೆ ಕನ್ನಡ, 10.30ರಿಂದ 11 ಗಣಿತ, ಇಂಗ್ಲಿಷ್ ಮಾಧ್ಯಮ ವಿದ್ಯಾರ್ಥಿಗಳಿಗೆ ಮಧ್ಯಾಹ್ನ 2.30ರಿಂದ 3ರವರೆಗೆ ಗಣಿತ ತರಗತಿ ಇರುತ್ತದೆ.
ಪ್ರತಿ ಮಂಗಳವಾರ ಬೆಳಗ್ಗೆ 10ರಿಂದ 10.30ರವರೆಗೆ ಇಂಗ್ಲಿಷ್, 10.30ರಿಂದ 11 ವಿಜ್ಞಾನ ತರಗತಿ.
ಬುಧವಾರ: ಬೆಳಗ್ಗೆ 10ರಿಂದ 10.30 ಹಿಂದಿ, 10.30ರಿಂದ 11 ಸಮಾಜ ವಿಜ್ಞಾನ ತರಗತಿ
9ನೇ ತರಗತಿ(ಕನ್ನಡ ಮಾಧ್ಯಮ): ಸೋಮವಾರ ಬೆಳಗ್ಗೆ 9ರಿಂದ 9.30ರವರೆಗೆ ಕನ್ನಡ, 9.30ರಿಂದ 10 ಗಣಿತ ಹಾಗೂ ಇಂಗ್ಲಿಷ್ ಮಾಧ್ಯಮ ವಿದ್ಯಾರ್ಥಿಗಳಿಗೆ ಮಧ್ಯಾಹ್ನ 2ರಿಂದ 2.30 ಗಣಿತ
ಪ್ರತಿ ಮಂಗಳವಾರ ಬೆಳಗ್ಗೆ 9ರಿಂದ 9.30 ಇಂಗ್ಲಿಷ್, 9.30ರಿಂದ 10 ವಿಜ್ಞಾನ ಹಾಗೂ ಇಂಗ್ಲಿಷ್ ಮಾಧ್ಯಮಕ್ಕೆ 2ರಿಂದ 2.30 ಸಮಾಜ ವಿಜ್ಞಾನ
ಪ್ರತಿ ಬುಧವಾರ ಬೆಳಗ್ಗೆ 9ರಿಂದ 9.30ರವರೆಗೆ ಹಿಂದಿ, 9.30ರಿಂದ 10ಸಮಾಜ ವಿಜ್ಞಾನ ಹಾಗೂ ಇಂಗ್ಲಿಷ್ ಮಾಧ್ಯಮಕ್ಕೆ ಮಧ್ಯಾಹ್ನ 2ರಿಂದ 2.30 ವಿಜ್ಞಾನ ತರಗತಿ ಇರುತ್ತದೆ.
10ನೇ ತರಗತಿ(ಕನ್ನಡ ಮಾಧ್ಯಮ): ಸೋಮವಾರ ಬೆಳಗ್ಗೆ 8ರಿಂದ 8.30 ಕನ್ನಡ, 8.30ರಿಂದ 9ಗಣಿತ ಹಾಗೂ ಇಂಗ್ಲಿಷ್ ಮಾಧ್ಯಮಕ್ಕೆ ಬೆಳಗ್ಗೆ 11.30ರಿಂದ 12 ಗಣಿತ, 1.30ರಿಂದ 2 ವಿಜ್ಞಾನ
-ಮಂಗಳವಾರ ಬೆಳಗ್ಗೆ 8ರಿಂದ 8.30 ಕನ್ನಡ, 8.30ರಿಂದ 9 ಗಣಿತ ಹಾಗೂ ಇಂಗ್ಲಿಷ್ ಮಾಧ್ಯಮಕ್ಕೆ ಬೆಳಗ್ಗೆ 11.30ರಿಂದ 12 ಸಮಾಜ ವಿಜ್ಞಾನ, 1.30ರಿಂದ 2 ಗಣಿತ ತರಗತಿ
-ಬುಧವಾರ ಬೆಳಗ್ಗೆ 8ರಿಂದ 8.30 ಇಂಗ್ಲಿಷ್, 8.30ರಿಂದ 9 ವಿಜ್ಞಾನ ಹಾಗೂ ಇಂಗ್ಲಿಷ್ ಮಾಧ್ಯಮಕ್ಕೆ ಬೆಳಗ್ಗೆ 11.30ರಿಂದ 12 ವಿಜ್ಞಾನ, 1.30ರಿಂದ 2 ಸಮಾಜ ವಿಜ್ಞಾನ ತರಗತಿ.
-ಗುರುವಾರ ಬೆಳಗ್ಗೆ 8ರಿಂದ 8.30 ಹಿಂದಿ, 8.30ರಿಂದ 9ಸಮಾಜ ವಿಜ್ಞಾನ
-ಶುಕ್ರವಾರ ಬೆಳಗ್ಗೆ ಬೆಳಗ್ಗೆ 8ರಿಂದ 8.30 ವಿಜ್ಞಾನ, 8.30ರಿಂದ 9 ಸಮಾಜ ವಿಜ್ಞಾನ ತರಗತಿ ಇರುತ್ತದೆ.