ಲಂಚ ಹಗರಣದಲ್ಲಿ ಶ್ರೀರಾಮುಲು, ವಿಜಯೇಂದ್ರ ಪಾತ್ರದ ಬಗ್ಗೆಯೂ ತನಿಖೆಯಾಗಲಿ: ಸಿದ್ದರಾಮಯ್ಯ
Update: 2021-07-02 18:59 IST
ಬೆಂಗಳೂರು, ಜು. 2: `ಲಂಚ ಪಡೆದ ಸಿಬ್ಬಂದಿಯನ್ನು ಬಂಧಿಸಿದರಷ್ಟೇ ಸಾಲದು, ಆತ ಯಾರ ಪರವಾಗಿ ಲಂಚ ಪಡೆದಿದ್ದಾನೆ ಮತ್ತು ಪಡೆದಿರುವ ಲಂಚವನ್ನು ಯಾರಿಗೆ ಕೊಟ್ಟಿದ್ದಾನೆ ಎಂಬ ಬಗ್ಗೆಯೂ ತನಿಖೆಯಾಗಬೇಕು' ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಶುಕ್ರವಾರ ಟ್ವೀಟ್ ಮಾಡಿರುವ ಅವರು, `ಈ ಲಂಚ ಹಗರಣದಲ್ಲಿ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಹೆಸರೂ ತಳುಕು ಹಾಕಿಕೊಂಡಿರುವುದರಿಂದ ಅವರಿಬ್ಬರ ಪಾತ್ರದ ಬಗ್ಗೆಯೂ ತನಿಖೆ ನಡೆದರೆ ಅಸಲಿ ಸತ್ಯ ಹೊರಬರಬಹುದು' ಎಂದು ಒತ್ತಾಯಿಸಿದ್ದಾರೆ.