ತನಿಖೆಗೆ ಮೊದಲೇ ಆರೋಪಿಗಳ ಗುರುತು ಬಹಿರಂಗಪಡಿಸಬಾರದೆಂಬ ಆದೇಶ ಪಾಲಿಸುತ್ತಿರುವ ಪೊಲೀಸ್ ಇಲಾಖೆ

Update: 2021-07-02 17:42 GMT

ಬೆಂಗಳೂರು, ಜು.2: ತನಿಖೆ ಪೂರ್ಣಗೊಳ್ಳುವ ಮೊದಲೇ ಮಾಧ್ಯಮಗಳಿಗೆ ಆರೋಪಿಗಳ ಗುರುತು ಬಹಿರಂಗಪಡಿಸದಂತೆ ಪೊಲೀಸರಿಗೆ ಬೆಂಗಳೂರಿನ ಹೈಕೋರ್ಟ್ ಪ್ರಧಾನ ಪೀಠ ಆದೇಶಿಸಿದ್ದು, ಇತ್ತೀಚಿಗಿನ ಪೊಲೀಸ್ ಪ್ರಕಟಣೆಗಳಲ್ಲಿ ಈ ಆದೇಶದ ಪಾಲನೆ ಕಂಡುಬರುತ್ತಿದೆ.

ಇತ್ತೀಚಿಗೆ ಯಾವುದೇ ಅಪರಾಧ ಪ್ರಕರಣ ಸಂಬಂಧ ಪೊಲೀಸರ ಪ್ರಕಟಣೆಯಲ್ಲಿ ಆರೋಪಿಗಳ ಹೆಸರು ಪ್ರಕಟಣೆ ಮಾಡಲಾಗುತ್ತಿಲ್ಲ ಹಾಗೂ ಅವರ ಚಿತ್ರಗಳನ್ನು ಮಸುಕುಗೊಳಿಸಿ ಪ್ರಕಟಿಸಿರುವುದು ಕಂಡುಬರುತ್ತಿದೆ.

ಜೂ.15ರಂದು ಹೈಕೋರ್ಟ್ ಪೊಲೀಸರಿಗೆ ಈ ಸೂಚನೆ ನೀಡಿತ್ತು. ವಕೀಲ್ ಎಚ್. ನಾಗಭೂಷಣ್ ರಾವ್ ಅವರು, ಮಾಧ್ಯಮಗಳಿಗೆ ಪೊಲೀಸರು ಆರೋಪಿಗಳು ಹಾಗೂ ತನಿಖಾ ವಿವರಗಳನ್ನು ಹಂಚಿಕೊಳ್ಳುವುದರ ವಿರುದ್ಧ ಅರ್ಜಿ ಸಲ್ಲಿಸಿದ್ದರು. ಆನಂತರ, ತನಿಖೆ ಪೂರ್ಣಗೊಳ್ಳುವವರೆಗೂ ಆರೋಪಿಗಳ ವಿವರಗಳನ್ನು ಬಹಿರಂಗಪಡಿಸದಂತೆ ಹೈಕೋರ್ಟ ನಿರ್ದೇಶಿಸಿತ್ತು.ಪೊಲೀಸರಿಗೆ ಸೂಚಿಸಿತ್ತು. ಈ ಸಂಬಂಧ ರಾಜ್ಯ ಸರಕಾರಪೊಲೀಸರಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ತಿಳಿಸಿತ್ತು. ತನಿಖೆ ಪೂರ್ಣಗೊಳ್ಳುವ ಮುನ್ನ,ಪೊಲೀಸರು ತನಿಖೆಯ ಸ್ವರೂಪ, ತನಿಖೆ ಸಮಯದಲ್ಲಿ ಸಂಗ್ರಹಿಸಿದ ವಸ್ತುಗಳು ಇತ್ಯಾದಿಗಳನ್ನು ಬಹಿರಂಗಪಡಿಸಬಾರದು.ಪೊಲೀಸರಿಗೆ ಸಮಗ್ರ ನಿರ್ದೇಶನಗಳನ್ನು ನೀಡಬೇಕಾಗಿದೆ ಎಂದು ವಿಭಾಗೀಯ ಪೀಠದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ತಿಳಿಸಿದ್ದರು.

ಈ ನಿರ್ದೇಶನಗಳನ್ನು ಉಲ್ಲಂಘಿಸಿದರೆ ಪೊಲೀಸ್ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜಾರಿಗೊಳಿಸಬೇಕಾಗುತ್ತದೆ ಎಂದು ಹೇಳಿದ ಪೀಠವು, ನಾಲ್ಕು ವಾರಗಳಲ್ಲಿ ಈ ನಿರ್ದೇಶನ ಜಾರಿಗೆ ತರಲು ರಾಜ್ಯ ಸರಕಾರಕ್ಕೆ ಸೂಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News