×
Ad

ಮಹಿಳೆಯಿಂದ ಸ್ಥಳೀಯ ನಿವಾಸಿಗಳಿಗೆ 48 ಲಕ್ಷ ರೂ. ವಂಚನೆ: ಪ್ರಕರಣ ದಾಖಲು

Update: 2021-07-02 23:13 IST

ಮೈಸೂರು,ಜು.2:ಸಾತಗಳ್ಳಿ ಬಡಾವಣೆಯ ನಿವಾಸಿ ಮಹಿಳೆಯೋರ್ವರು ಸ್ಥಳೀಯ ನಿವಾಸಿಗಳಿಗೆ ಸುಮಾರು 48ಲಕ್ಷ ರೂ.ವಂಚಿಸಿರುವ ಘಟನೆ ನಡೆದಿದ್ದು, ಈ ಕುರಿತು ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾತಗಳ್ಳಿ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ನೆಲೆಸಿದ್ದ ಹೇಮಲತಾ(48) ಎಂಬ ಮಹಿಳೆ  ದೇವರು, ಧರ್ಮದ ವಿಚಾರ ಹೇಳುತ್ತಾ ಸುತ್ತಮುತ್ತಲ ನಿವಾಸಿಗಳ ವಿಶ್ವಾಸ ಗಳಿಸಿದ್ದರು. ಚೀಟಿ ವ್ಯವಹಾರದಲ್ಲಿ ಹೂಡಿಕೆ ಮಾಡುವುದಾಗಿ ಹೇಳಿ ಕೆಲವರಿಂದ ಹಣ ಸಂಗ್ರಹಿಸಿದರೆ ಮತ್ತೆ ಕೆಲವರಿಂದ ಸಾಲವಾಗಿಯೂ ಹಣ ಪಡೆದಿದ್ದರು. ಇಲ್ಲಿಯವರೆಗೆ ಒಟ್ಟು 48 ಲಕ್ಷದಷ್ಟು ಹಣವನ್ನು ವಂಚಿಸಿರುವ ಕುರಿತು ಮಾಹಿತಿ ಲಭಿಸಿದೆ ಎನ್ನಲಾಗಿದೆ.

ಈ ಕುರಿತು ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಮಹಿಳೆಗಾಗಿ ಶೋಧಕಾರ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News