ಗ್ರಾ.ಪಂ.ಗಳಲ್ಲಿ ಖಾಲಿ ಇರುವ ಗ್ರೇಡ್-2 ಹುದ್ದೆಗಳ ನೇರ ನೇಮಕಾತಿ
Update: 2021-07-03 17:55 IST
ಬೆಂಗಳೂರು, ಜು. 3: ಗ್ರಾಮ ಪಂಚಾಯತ್ ಗಳಲ್ಲಿ ಖಾಲಿ ಇರುವ `ಗ್ರೇಡ್-2' ಹುದ್ದೆಗೆ ಗ್ರಾ.ಪಂ.ಗಳ ಬಿಲ್ ಕಲೆಕ್ಟರ್/ ಗುಮಾಸ್ತ/ಬೆರಳಚ್ಚುಗಾರರ(ಹುದ್ದೆ ಪದನಾಮ ಬದಲಾವಣೆಯಾಗಿರುವ ಕ್ಲರ್ಕ್ ಕಮ್ ಡಾಟಾ ಎಂಟ್ರಿ ಆಪರೇಟರ್) ಹುದ್ದೆಯಿಂದ ಆಯ್ಕೆ ಮೂಲಕ ನೇರ ನೇಮಕಾತಿ ಮಾಡಿಕೊಳ್ಳಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧೀನ ಕಾರ್ಯದರ್ಶಿ ಬಿ.ನವೀನ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ಪ್ರಸ್ತುತ ಆರ್ಥಿಕ ಇಲಾಖೆಯು ಗ್ರಾಮ ಪಂಚಾಯತ್ ಗಳಲ್ಲಿ ಖಾಲಿ ಇರುವ ಗ್ರೇಡ್-2 ಗ್ರಾಮ ಪಂಚಾಯತ್ ಕಾರ್ಯದರ್ಶಿ/ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಗೆ ಅವಶ್ಯಕತೆಗೆ ಅನುಗುಣವಾಗಿ ಗ್ರಾಮ ಪಂಚಾಯತ್ ಸಿಬ್ಬಂದಿಗಳಿಂದ ಆಯ್ಕೆ ಮೂಲಕ ನಿಯಮಾನುಸಾರ ತುಂಬಲು ಒಪ್ಪಿಗೆ ನೀಡಲಾಗಿದೆ. ಈ ಸಂಬಂಧ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘದ ಆಗ್ರಹದ ಹಿನ್ನೆಲೆಯಲ್ಲಿ ಇಲಾಖೆ ಆದೇಶ ಹೊರಡಿಸಿದೆ ಎಂದು ಗೊತ್ತಾಗಿದೆ.