×
Ad

ಒಸಿಐ ಕಾರ್ಡ್ ವಿದ್ಯಾರ್ಥಿಗಳಿಗೆ ಸಿಇಟಿಗೆ ಅವಕಾಶ ನೀಡಿ: ಹೈಕೋರ್ಟ್

Update: 2021-07-03 18:18 IST

ಬೆಂಗಳೂರು, ಜು.3: ಸಾಗರೋತ್ತರ ಭಾರತೀಯ ನಾಗರಿಕ (ಒಸಿಐ) ಕಾರ್ಡ್‍ಗಳನ್ನು ಹೊಂದಿರುವ 45 ವಿದ್ಯಾರ್ಥಿಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ)-2021 ತೆಗೆದುಕೊಳ್ಳಲು ಅವಕಾಶ ನೀಡುವಂತೆ ಹೈಕೋರ್ಟ್ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ(ಕೆಇಎ) ನಿರ್ದೇಶನ ನೀಡಿದೆ.

ಕೇಂದ್ರ ಸರಕಾರ ಮತ್ತು ಕೆಇಎ ಹೊರಡಿಸಿದ ಅಧಿಸೂಚನೆಗಳನ್ನು ರದ್ದುಪಡಿಸುವಂತೆ ನಿರ್ದೇಶನಗಳನ್ನು ನೀಡಲು ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಆದೇಶ ನೀಡಿತು.

ಕೇಂದ್ರ ಸರಕಾರ ಹೊರಡಿಸಿರುವ ಅಧಿಸೂಚನೆಯು ಒಸಿಐ ಕಾರ್ಡ್ ಹೊಂದಿದವರನ್ನು ನಾಗರಿಕರೆಂದು ಪರಿಗಣಿಸುವ ಹಕ್ಕು ನಿರಾಕರಿಸಿದೆ. ಎನ್‍ಆರ್‍ಐ ಸೀಟುಗಳಿಗೆ ಮಾತ್ರ ಅವರು ಅರ್ಹರು. ಭಾರತೀಯ ನಾಗರಿಕರಿಗೆ ಮೀಸಲಾಗಿರುವ ಸೀಟುಗಳಿಗೆ ಒಸಿಐ ಕಾರ್ಡುದಾರರು ಅರ್ಹರಲ್ಲ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿತ್ತು.

ಸಿಇಟಿ–2021ಕ್ಕೆ ನೋಂದಾಯಿಸುವ ಹಕ್ಕು ನಿರಾಕರಿಸಿದರೆ, ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸುವ ಅವಕಾಶ ನಿರಾಕರಣೆ ಆಗಲಿದೆ ಎಂಬುದು ಅರ್ಜಿದಾರರ ವಾದ. ಅರ್ಜಿದಾರರು ಭಾರತದಲ್ಲಿ ನೆಲೆಸಿ ಏಳೆಂಟು ವರ್ಷಗಳಿಂದ ತಮ್ಮ ಶಿಕ್ಷಣವನ್ನು ಇಲ್ಲಿಯೇ ನಡೆಸಿದ್ದಾರೆ. ಅವರು ಸಿಇಟಿ ಪರೀಕ್ಷೆ ತೆಗೆದುಕೊಳ್ಳಲು ಅವಕಾಶ ನೀಡಬೇಕು ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News