ಹರಿಹರ: 4 ವರ್ಷದ ಮಗಳಿಗೆ ನೇಣು ಹಾಕಿ ಆತ್ಮಹತ್ಯೆಗೆ ಶರಣಾದ ಮಹಿಳೆ

Update: 2021-07-03 13:23 GMT
ಸಾಂದರ್ಭಿಕ ಚಿತ್ರ

ಹರಿಹರ: 4 ವರ್ಷದ ಮಗಳಿಗೆ ನೇಣು ಬಿಗಿದು ಬಳಿಕ ತಾಯಿಯೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕಕೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬನ್ನಿಕೋಡ ಗ್ರಾಮದಲ್ಲಿ ಇಂದು ಬೆಳಗಿನ ಜಾವ ನಡೆದಿದೆ.

30 ವರ್ಷದ ಚಂದ್ರಮ್ಮ ಹಾಗೂ ನಾಲ್ಕು ವರ್ಷದ ಮಗಳು ಹರ್ತಿತಾ ಮೃತಪಟ್ಟವರು. ಆತ್ಮಹತ್ಯೆಗೈದ ಚಂದ್ರಮ್ಮ ಪತಿ ಮಂಜಪ್ಪ ಡಿಎಆರ್ ಪೊಲೀಸ್ ಸೇವೆಯಲ್ಲಿದ್ದು, ಇಂದು ಬೆಳಗ್ಗೆ ನ್ಯಾಯಾದೀಶರ ಮನೆಗೆ ಕರ್ತವ್ಯಕ್ಕೆ ತೆರಳುವುದಾಗಿ ಹೇಳಿ ಹೋಗಿದ್ದಾರೆನ್ನಲಾಗಿದ್ದು, ಬಳಿಕ ಚಂದ್ರಮ್ಮ ಮಗುವಿಗೆ ನೇಣು ಹಾಕಿ ಬಳಿಕ ತಾವು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದು ಬಂದಿದೆ. ಆದರೆ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.

ಹರಿಹರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News