ಕೋಲಾರದಲ್ಲಿ ಹೊತ್ತಿ ಉರಿದ ಪವರ್ ಸ್ಟೇಷನ್: ವಿದ್ಯುತ್ ಪೂರೈಕೆ ಘಟಕದಲ್ಲಿ ಭಾರೀ ಅಗ್ನಿ ಅವಘಡ
ಕೋಲಾರ : ಕೊಲಾರ ನಗರದ ಬೆಸ್ಕಾಂ ವಿದ್ಯುತ್ ಸಂಪರ್ಕ ಕಲ್ಪಿಸುವ ಟ್ರಾನ್ಸ್ ಫಾರ್ಮರ್ ಶಾರ್ಟ್ ಸರ್ಕ್ಯೂಟ್‍ನಿಂದ ಪವರ್ ಸ್ಟೇಷನ್‍ನಲ್ಲಿ ಭಾರಿ ಅಗ್ನಿಅವಗಡ ಸಂಭವಿಸಿದ ಘಟನೆ ಶನಿವಾರ ಮದ್ಯಾಹ್ನ ಜರುಗಿದೆ.
ಕೋಲಾರ ನಗರದ ಬೈಪಾಸ್ ಬಳಿ ಇರುವ 220 ಕೆ.ವಿ.ಸಾಮಥ್ರ್ಯದ ಟ್ರಾನ್ಸ್ ಫಾರ್ಮರ್ ಇಡೀ ನಗರಕ್ಕೆ ವಿದ್ಯುತ್ ಪೂರೈಸುವ ಹಾಗೂ ಬಂಗಾರಪೇಟೆ, ಮುಳಬಾಗಿಲು ತಾಲ್ಲೂಕಿನ ಕೆಲವು ಭಾಗಗಳಿಗೆ ವಿದ್ಯುತ್ ಸ್ಪಪ್ಲೈ ಮಾಡುವ ಫೀಡರ್ ಆಗಿದೆ. ಶನಿವಾರ ಬೆಸ್ಕಾಂ ಪವರ್ ಸ್ಟೇಷನ್‍ನಲ್ಲಿ ಬೆಂಕಿ ಹೊತ್ತಿಕೊಂಡ ಟ್ರಾನ್ಸ್ ಫಾರ್ಮರ್ ಸುಮಾರು 35 ವರ್ಷದಷ್ಟು ಹಳೆಯದಾಗಿದ್ದು, ಬೆಂಗಳೂರಿನ ಎನ್.ಜಿ.ಇ.ಎಫ್ ಸಂಸ್ಥೆಯಿಂದ ಸರಬರಾಜು ಆಗಿದ್ದ ಸುಮಾರು 50 ಸಾವಿರ ಲೀಟರ್ ಆಯಿಲ್ ಹೊಂದಿರುವ ಟ್ರಾನ್ಸ್ ಫಾರ್ಮರ್ ಅಗ್ನಿ ದುರಂತಕ್ಕೀಡಾಗಿದೆ.
ತಕ್ಷಣವೇ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ ಆಗ್ನಿಶಾಮಕ ದಳ ಬೆಂಕಿ ನಂದಿಸಲು ಹರಸಾಹಸ ಪಡಬೇಕಾಯಿತು. ಅಗ್ನಿ ದುರಂತದಲ್ಲಿ ಪ್ರಾಣಹಾನಿ ಬಗ್ಗೆ ಇನ್ನೂ ಯಾವುದೇ ಖಚಿತ ಮಾಹಿತಿ ಲಭ್ಯವಾಗಿಲ್ಲ. ಸುಮಾರು ಹತ್ತು ಬೆಂಕಿ ನಂದಿಸುವ ವಾಹನಗಳು ಒಂದೂವರೆ ಘಂಟೆ ಕಾರ್ಯ ನಿರ್ವಹಿಸಿ ಬೆಂಕಿ ನಂದಿಸಲಾಗಿದೆ. ಇಡೀ ನಗರಕ್ಕೆ ವಿದ್ಯುತ್ ಪೂರೈಸುವ ಎರಡು ಟ್ರಾನ್ಸ್ ಫಾರ್ಮರ್‍ಗಳಲ್ಲಿ ಒಂದು ಟ್ರಾನ್ಸ್ ಫಾರ್ಮರ್‍ನಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ.
ಸಮಸ್ಯೆ ಬಗೆಹರಿಯುವ ತನಕ ಜನ ಕತ್ತಲೆಯಲ್ಲಿ ಕಳೆಯಬೇಕಾಗುತ್ತದೆ ಎಂಬ ಆತಂಕದಲ್ಲಿ ಜನರಲ್ಲಿ ಮೂಡಿದೆ.
ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ್ ಬಾಬು, ತಹಶೀಲ್ದಾರ್, ಶೋಬಿತಾ ಸೇರಿದಂತೆ ಇಲಾಖಾ ಅಧಿಕಾರಿಗಳು ಹಾಗೂ ಇಂಜಿನಿಯರ್‍ಗಳು ಭೇಟಿ ನೀಡಿ ಪರಿಶೀಲಿಸಿದರು.