ಆರ್ ಟಿಇ ಬಾಕಿ ಹಣದಲ್ಲಿ ಶಿಕ್ಷಕರಿಗೆ ಸಹಾಯಧನ ನೀಡುವುದು ಸರಿಯಲ್ಲ: ಶಶಿಕುಮಾರ್

Update: 2021-07-03 17:10 GMT

ಬೆಂಗಳೂರು, ಜು.3: ಅನುದಾನರಹಿತ ಖಾಸಗಿ ಶಾಲೆಗಳಲ್ಲಿ ನೀಡಬೇಕಾದ ಆರ್ ಟಿಇ ಮರುಪಾವತಿ ಹಣದಲ್ಲೇ ಖಾಸಗಿ ಶಾಲಾ ಶಿಕ್ಷಕರಿಗೆ ಕೋವಿಡ್ ಪರಿಹಾರ ಧನ ನೀಡಲು ಮುಂದಾಗಿರುವ ರಾಜ್ಯ ಸರಕಾರದ ಕ್ರಮ ಸರಿಯಲ್ಲವೆಂದು ಖಾಸಗಿ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟದ ಕಾರ್ಯದರ್ಶಿ ಶಶಿಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಟಿ ಮಾತನಾಡಿದ ಅವರು, ಆರ್ ಟಿಇ ಮರುಪಾವತಿ ಹಣವನ್ನು ಮೊಟಕುಗೊಳಿಸಿ ಖಾಸಗಿ ಶಾಲಾ ಶಿಕ್ಷಕರಿಗೆ ತಲಾ ಐದು ಸಾವಿರ ರೂ.ಕೊಡಲು ಮುಂದಾಗಿರುವುದು ಸರಕಾರದ ದೌರ್ಭಾಗ್ಯದ ವಿಷಯವಾಗಿದೆ. ರಾಜ್ಯ ಸರಕಾರ ಖಾಸಗಿ ಶಿಕ್ಷಕರಿಗೆ ಈ ರೀತಿ ವಂಚನೆ ಮಾಡುತ್ತದೆ ಎಂದು ನಿರೀಕ್ಷಿಸಿರಲಿಲ್ಲವೆಂದು ತಿಳಿಸಿದ್ದಾರೆ.

2020-21ನೇ ಆರ್ ಟಿಇ ಮರುಪಾವತಿ ನೀಡುವಂತಹ ಪ್ರಕ್ರಿಯೆಯಲ್ಲಿ ಆಯುಕ್ತರ ಕಚೇರಿ ವಿಫಲವಾಗಿದೆ. ಕಳೆದ ಹಲವು ವರ್ಷಗಳಿಂದ ಇತರೆ ಆಯುಕ್ತರು ಹಾಗೂ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಸಮಸ್ಯೆಗಳನ್ನು ಬಗೆ ಹರಿಸಿ ಆಯಾ ಶಾಲೆಗಳಿಗೆ ಖರ್ಚು ವೆಚ್ಚಗಳನ್ನು ಪರಿಗಣಿಸಿ ಆರ್ ಟಿಇ ಬಾಕಿಹಣ ಮರುಪಾವತಿ ಮಾಡಿದ್ದಾರೆ. ಆದರೆ, ಕಳೆದ 2ವರ್ಷಗಳಿಂದ ಆರ್ ಟಿಇ ಮರುಪಾವತಿಸಲು ಖರ್ಚು ವೆಚ್ಚಗಳನ್ನು ಸರಿಯಾಗಿ ಪರಗಣಿಸಿಲ್ಲವೆಂದು ಅವರು ಆರೋಪಿಸಿದ್ದಾರೆ.

ರಾಜ್ಯಾದ್ಯಂತ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿ ಮೇಲೆ ದೂರುಗಳನ್ನು ನೀಡಿದರೂ ಆರ್ ಟಿಇ ಮರುಪಾವತಿ ಭ್ರಷ್ಟಾಚಾರದಿಂದ ಇತರೆ ವರ್ಷಗಳಿಗಿಂತ 2020-21ರ ಮರುಪಾವತಿಯಲ್ಲಿ ನಡೆಸಲಾಗುತ್ತಿದೆ. ಇದಕ್ಕೆ ಶಿಕ್ಷಣ ಸಚಿವ ಸುರೇಶ್‍ಕುಮಾರ್ ನೇರ ಹೊಣೆ ಹೊರಬೇಕೆಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News