ಪೊಲೀಸರು ವಿಜಯೇಂದ್ರ ಮನೆಯ ಕಾಲಾಳುಗಳಂತೆ ಆಗಿದ್ದಾರೆಯೇ?: ಕಾಂಗ್ರೆಸ್ ಟೀಕೆ
ಬೆಂಗಳೂರು, ಜು. 3: 'ರಾಜ್ಯದಲ್ಲಿ ಅಧಿಕಾರಿಗಳದ್ದು ಡೀಲಿಂಗ್, ಸಚಿವರದ್ದು ಡೀಲಿಂಗ್, ಸಚಿವರ ಪಿಎಗಳದ್ದೂ ಡೀಲಿಂಗ್! ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ, ನಿಮ್ಮ ಪಕ್ಷದ ಈ ಸರಕಾರ ಎಷ್ಟು ಪರ್ಸೆಂಟ್ ನದ್ದು ಸ್ವಲ್ಪ ಹೇಳಿ?!' ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಶನಿವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, `ಅರೆಸ್ಟ್ ಮಾಡಿ ಎಂದಾಗ ಅರೆಸ್ಟ್ ಮಾಡುವುದು, ಬಿಡುಗಡೆ ಮಾಡಿ ಎಂದಾಗ ಬಿಡುಗಡೆ ಮಾಡುವುದಕ್ಕೆ ಪೊಲೀಸರು ಬಿ.ವೈ.ವಿಜಯೇಂದ್ರ ಮನೆಯ ಕಾಲಾಳುಗಳಂತೆ ಆಗಿದ್ದಾರೆಯೇ? ಎಫ್‍ಐಆರ್ ದಾಖಲಾಗಿದ್ದರೂ ಆರೋಪಿಯನ್ನ ಬಿಡುಗಡೆ ಮಾಡುವುದರ ಹಿಂದೆ ಭ್ರಷ್ಟ ಹಣದ `ಸೆಟಲ್ಮೆಂಟ್' ನಡೆದಿರುವಂತಿದೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರೇ, ಪೊಲೀಸ್ ಇಲಾಖೆ ನಿಮ್ಮ ಪಕ್ಷದ ಅನುಕೂಲಕ್ಕೆ ಇರುವುದೇ?' ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
`ವಂಚನೆ ಪ್ರಕರಣದಲ್ಲಿ ಸಚಿವ ಬಿ.ಶ್ರೀರಾಮುಲು ಅವರ ಪಿಎ ಬಂಧಿಸಿದ ವೇಗದಲ್ಲಿಯೇ ಬಿಡುಗಡೆಗೊಳಿಸಿದ್ದು ರಾಜ್ಯದಲ್ಲಿ ಪೊಲೀಸರಿಗೆ ಸ್ವತಂತ್ರವಿಲ್ಲದ ವಾತಾವರಣಕ್ಕೆ ಸಾಕ್ಷಿ. ಎಫ್‍ಐಆರ್ ಆಗಿದ್ದರೂ ಕೋರ್ಟಿಗೆ ಹಾಜರುಪಡಿಸದೆ ಬಿಡುಗಡೆಗೊಳಿಸಿದ್ದು ಏಕೆ? ಪ್ರಭಾವ ಬೀರಿದ್ದು ಯಾರು? ಬಿಜೆಪಿ ಆಡಳಿತದಲ್ಲಿ ಕಾನೂನು ಎಂಬುದು ಪುಸ್ತಕದ ಬದನೆಕಾಯಿಯಾಗಿದೆ' ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
`ಸಿಡಿ ಪಾರ್ಟಿ' ಬಿಜೆಪಿ ಸರಕಾರದ ಸಚಿವ ಡಾ.ಕೆ.ಸುಧಾಕರ್ ಇತರರ ಪತ್ನಿಯರ ಲೆಕ್ಕ ಕೇಳಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ!
ಬಿಜೆಪಿಯವರ ಒಳಹುಳುಕುಗಳ ಬಗ್ಗೆ ಎಲ್ಲರಿಗಿಂತ ಬಿಜೆಪಿಯವರಿಗೆ ಚೆನ್ನಾಗಿ ಅರಿವಿರುವಂತಿದೆ! ಗಡಿಬಿಡಿಯಲ್ಲಿ ತಡೆಯಾಜ್ಞೆ ತಂದ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರಿಗೆ ತಮ್ಮ ಸಿಡಿ ಬಿಡುಗಡೆಯ ಕನಸು ಬಿದ್ದಿತ್ತೇ?!' ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
`ತಮ್ಮವರಿಂದಲೇ `ಬ್ಲಾಕ್ ಮೇಲ್ ಜನತಾ ಪಾರ್ಟಿ' ಎಂದು ಕರೆಸಿಕೊಂಡ ಬಿಜೆಪಿಯಲ್ಲಿ ಬ್ಲಾಕ್‍ಮೇಲ್ ಭರ್ಜರಿಯಾಗಿ ನಡೆಯುತ್ತಿರುವಂತಿದೆ. ಕಂಡವರ ಬೆಡ್ ರೂಮಲ್ಲಿ ಕ್ಯಾಮೆರಾ ಇಡುವ ಚಾಳಿ ಹೊಂದಿರುವ ಬಿಜೆಪಿ ನಾಯಕರು ಡಿ.ವಿ. ಸದಾನಂದಗೌಡ ಅವರನ್ನೂ ಬ್ಲಾಕ್‍ಮೇಲ್ ಮಾಡುತ್ತಿರುವಂತಿದೆ. ಬಿಜೆಪಿಯಲ್ಲಿ ಸ್ವಚ್ಛ ಚಾರಿತ್ರ್ಯ ಹೊಂದಿದವರು ಒಬ್ಬರೂ ಇಲ್ಲ' ಎಂದು ಕಾಂಗ್ರೆಸ್ ಟೀಕಿಸಿದೆ.
`ಕಳ್ಳನ ಮನಸು ಹುಳ್ಳುಳ್ಳಗೆ ಎಂಬಂತೆ ಕೇಂದ್ರ ಸಚಿವ ಡಿ.ವಿಸದಾನಂದಗೌಡ ಅವರು ಸಿಡಿ ಬಿಡುಗಡೆಯಾಗದಂತೆ ತಡೆಯಾಜ್ಞೆ ತಂದಿದ್ದಾರೆ, ತಡೆಯಾಜ್ಞೆ ತಂದ ಬಿಜೆಪಿಗರಲ್ಲಿ ಇವರು ಏಳನೆಯವರು! ಬಿಜೆಪಿಯವರಿಗೇ ಏಕೆ ಈ ಪರಿ ಸಿಡಿ ಭಯ ಕಾಡುವುದು ಎಂಬದೇ ಯಕ್ಷಪ್ರಶ್ನೆ. ತಡೆಯಾಜ್ಞೆ ತರುವ ಮೂಲಕ ತಮ್ಮದೂ ಸಿಡಿ ಇದೆ ಎಂದು ಗೌಡರು ಸ್ವಯಂ ಒಪ್ಪಿಕೊಂಡಂತಾಗಿದೆ!', ಎಂದೂ ಕಾಂಗ್ರೆಸ್ ಟ್ವೀಟ್ ಮಾಡಿದೆ.
ರಾಜ್ಯದಲ್ಲಿ ಅಧಿಕಾರಿಗಳದ್ದು ಡೀಲಿಂಗ್, ಸಚಿವರದ್ದು ಡೀಲಿಂಗ್, ಸಚಿವರ ಪಿಎಗಳದ್ದೂ ಡೀಲಿಂಗ್!@AmitShah ಅವರೇ, ನಿಮ್ಮ ಪಕ್ಷದ ಈ ಸರ್ಕಾರ ಎಷ್ಟು ಪರ್ಸೆಂಟ್ನದ್ದು ಸ್ವಲ್ಪ ಹೇಳಿ?!
— Karnataka Congress (@INCKarnataka) July 3, 2021
ಅರೆಸ್ಟ್ ಮಾಡಿ ಎಂದಾಗ ಅರೆಸ್ಟ್ ಮಾಡುವುದು, ಬಿಡುಗಡೆ ಮಾಡಿ ಎಂದಾಗ ಬಿಡುಗಡೆ ಮಾಡುವುದಕ್ಕೆ ಪೊಲೀಸರು @BYVijayendra ಮನೆಯ ಕಾಲಾಳುಗಳಂತಗಿದ್ದಾರೆಯೇ?
— Karnataka Congress (@INCKarnataka) July 3, 2021
FIR ದಾಖಲಾಗಿದ್ದರೂ ಆರೋಪಿಯನ್ನ ಬಿಡುಗಡೆ ಮಾಡುವುದರ ಹಿಂದೆ ಭ್ರಷ್ಟ ಹಣದ "ಸೆಟಲ್ಮೆಂಟ್" ನಡೆದಿರುವಂತಿದೆ.@BSBommai ಅವರೇ, ಪೊಲೀಸ್ ಇಲಾಖೆ ನಿಮ್ಮ ಪಕ್ಷದ ಅನುಕೂಲಕ್ಕೆ ಇರುವುದೇ?
ವಂಚನೆ ಪ್ರಕರಣದಲ್ಲಿ @sriramulubjp ಅವರ ಪಿಎ ಬಂಧಿಸಿದ ವೇಗದಲ್ಲಿಯೇ ಬಿಡುಗಡೆಗೊಳಿಸಿದ್ದು ರಾಜ್ಯದಲ್ಲಿ ಪೊಲೀಸರಿಗೆ ಸ್ವತಂತ್ರವಿಲ್ಲದ ವಾತಾವರಣಕ್ಕೆ ಸಾಕ್ಷಿ.
— Karnataka Congress (@INCKarnataka) July 3, 2021
FIR ಆಗಿದ್ದರೂ ಕೋರ್ಟಿಗೆ ಹಾಜರುಪಡಿಸದೆ ಬಿಡುಗಡೆಗೊಳಿಸಿದ್ದು ಏಕೆ? ಪ್ರಭಾವ ಬೀರಿದ್ದು ಯಾರು?
@BJP4Karnataka ಆಡಳಿತದಲ್ಲಿ ಕಾನೂನು ಎಂಬುದು ಪುಸ್ತಕದ ಬದನೆಕಾಯಿಯಾಗಿದೆ.
'ಸಿಡಿ ಪಾರ್ಟಿ' @BJP4Karnataka ಸಚಿವ @mla_sudhakar ಇತರರ ಪತ್ನಿಯರ ಲೆಕ್ಕ ಕೇಳಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ!
— Karnataka Congress (@INCKarnataka) July 3, 2021
ಬಿಜೆಪಿಯವರ ಒಳಹುಳುಕುಗಳ ಬಗ್ಗೆ ಎಲ್ಲರಿಗಿಂತ ಬಿಜೆಪಿಯವರಿಗೆ ಚೆನ್ನಾಗಿ ಅರಿವಿರುವಂತಿದೆ!
ಗಡಿಬಿಡಿಯಲ್ಲಿ ತಡೆಯಾಜ್ಞೆ ತಂದ @DVSadanandGowda ಅವರಿಗೆ ತಮ್ಮ ಸಿಡಿ ಬಿಡುಗಡೆಯ ಕನಸು ಬಿದ್ದಿತ್ತೇ?!