×
Ad

ವ್ಯಾಕ್ಸಿನ್ ಗಾಗಿ ಮಡಿಕೇರಿಯಲ್ಲಿ ಸರತಿ ಸಾಲು: ಜಿಲ್ಲಾಧಿಕಾರಿ ಭೇಟಿ

Update: 2021-07-03 23:36 IST

ಮಡಿಕೇರಿ ಜು.3 : ಕೊಡಗು ಜಿಲ್ಲೆಯ ಜನರಲ್ಲಿ ಕೋವಿಡ್ ನಿಯಂತ್ರಣದ ಬಗ್ಗೆ ಜಾಗೃತಿ ಮೂಡುತ್ತಿದ್ದು, ದಿನ ಕಳೆದಂತೆ ವ್ಯಾಕ್ಸಿನ್ ಪಡೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ.

ಇಂದು ನಗರದ ಓಂಕಾರ್ ಸದನದಲ್ಲಿ ನೂರಾರು ಮಂದಿ ವ್ಯಾಕ್ಸಿನ್ ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದ ದೃಶ್ಯ ಕಂಡು ಬಂತು. ಸ್ಥಳಕ್ಕೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. 

ಲಸಿಕೆಗಾಗಿ ನಿಂತಿದ್ದ ಸಾರ್ವಜನಿಕರೊಂದಿಗೆ ಚರ್ಚಿಸಿದರು. ವ್ಯಾಕ್ಸಿನ್ ಪಡೆಯಲು ಜಿಲ್ಲೆಯ ಜನ ಉತ್ಸಾಹ ತೋರುತ್ತಿರುವುದಕ್ಕೆ ಜಿಲ್ಲಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News