ಉತ್ತರ ಪ್ರದೇಶದ ಜಿ.ಪಂ.ಗಳಲ್ಲಿ ಬಿಜೆಪಿ ಚಾರಿತ್ರಿಕ ಗೆಲುವು: ನಳಿನ್ ಕುಮಾರ್ ಕಟೀಲು
Update: 2021-07-04 17:36 IST
ಬೆಂಗಳೂರು, ಜು. 4: `ಉತ್ತರ ಪ್ರದೇಶದ ಜಿಲ್ಲಾ ಪಂಚಾಯತ್‍ಗಳಲ್ಲಿ ಬಿಜೆಪಿ ಅತ್ಯದ್ಭುತ ಸಾಧನೆ ಮಾಡಿದೆ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಸಂತೋಷ ವ್ಯಕ್ತಪಡಿಸಿದ್ದು, `ಇದು 2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ದಿಕ್ಸೂಚಿಯಂತಿದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.
`ಜನಪರ ಕೆಲಸಗಳು ಮತ್ತು ಕೋವಿಡ್‍ನ ಅತ್ಯಂತ ಸಮರ್ಥ ನಿರ್ವಹಣೆಯ ಮೂಲಕ ವಿಶ್ವ ನಾಯಕರಾಗಿ ಹೊರಹೊಮ್ಮಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರ ಜನಪ್ರಿಯತೆ ಇನ್ನಷ್ಟು ಹೆಚ್ಚಿರುವುದಕ್ಕೆ ಇದು ಸಾಕ್ಷಿಯಂತಿದೆ. ಒಟ್ಟು 75 ಜಿಲ್ಲಾ ಪಂಚಾಯತ್‍ಗಳ ಅಧ್ಯಕ್ಷ ಸ್ಥಾನದ ಪೈಕಿ 67 ರಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಇದೊಂದು ಚಾರಿತ್ರಿಕ ಗೆಲುವು ಎಂದು ನಳಿನ್ ಕುಮಾರ್ ಕಟೀಲು ಪ್ರಕಟನೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.