ಚಾಮರಾಜನಗರ: ಕಾಡಿನೊಳಗೆ ಕರಡಿಗಳ ಕಾಳಗ
Update: 2021-07-04 18:08 IST
ಚಾಮರಾಜನಗರ : ಕಾಡಿನೊಳಗೆ ಕರಡಿಗಳೆರಡು ಘರ್ಷಣೆಗಿಳಿದ ಅಪರೂಪದ ಘಟನೆ ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅಪರೂಪಕ್ಕೆ ಕಾಣಿಸಿಕೊಳ್ಳುವ ಕರಡಿಗಳು ಸ್ವಚಂದ ವಿಹಾರ ಮಾಡುವುದು ಸಹಜವಾಗಿ ಕಾಣುತ್ತೇವೆ ಆದರೆ, ಕರಡಿಗಳೆರಡು ವೀರಾವೇಶದಿಂದ ಜಗಳವಾಡುವ ದೃಶ್ಯ ಇದೀಗ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ಕಾಡಿನೊಳಗೆ ವೀರಾವೇಷದಿಂದ ಸೆಣಸಾಡಿದ ಕರಡಿಗಳು ಶಾಂತವಾದ ಮೇಲೆ ಒಂದರ ಹಿಂದೆ ಒಂದು ಎಂಬಂತೆ ಕಾಡಿನೊಳಗೆ ತೆರಳಿದ ದೃಶ್ಯವೂ ಕೂಡ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.