×
Ad

ಲಸಿಕೆ ಕಾರ್ಯಕ್ರಮದಲ್ಲಿ ಪಾರದರ್ಶಕತೆ ಇಲ್ಲವೇಕೆ?: ಕಾಂಗ್ರೆಸ್ ಪ್ರಶ್ನೆ

Update: 2021-07-04 19:38 IST

ಬೆಂಗಳೂರು, ಜು. 4: `ಸಮರ್ಪಕ ಲಸಿಕೆ ನೀಡಲಾಗದ ಬಿಜೆಪಿ ಜಾಹೀರಾತುಗಳನ್ನ ಮಾತ್ರ ಎಲ್ಲೆಡೆಯಲ್ಲಿ ಹಾಕಿ ಲಸಿಕೆಯನ್ನ ಪಿಆರ್ ಮೆಟೀರಿಯಲ್ ಮಾಡಿಕೊಂಡಿದೆ ಬಿಜೆಪಿ. ರಾಜ್ಯಾದ್ಯಂತ ಲಸಿಕಾ ಕೇಂದ್ರಗಳ ಮುಂದೆ ಜನತೆ ಲಸಿಕೆಗಾಗಿ ಪರದಾಡುತ್ತಿದ್ದಾರೆ ಎಂದರೆ ರಾಜ್ಯಕ್ಕೆ ಲಸಿಕೆಗಳು ಬರಲಿಲ್ಲವೇ? ಬಂದವು ಎಲ್ಲಿ ಹೋದವು? ಲಸಿಕೆ ಕಾರ್ಯಕ್ರಮದಲ್ಲಿ ಪಾರದರ್ಶಕತೆ ಇಲ್ಲವೇಕೆ?' ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ರವಿವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, `ನೌಕರರು ಕೆಲಸಕ್ಕೆ ಹೋಗಲು ಲಸಿಕೆ ಪಡೆದಿರಬೇಕು. ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಲಸಿಕೆ ಪಡೆದಿರಬೇಕು. ವಿದೇಶ ಪ್ರಯಾಣಕ್ಕೆ ಲಸಿಕೆ ಪಡೆದಿರಬೇಕು. ಶಿಕ್ಷಕ ವರ್ಗದವರು ಲಸಿಕೆ ಪಡೆದಿರಬೇಕು. ಎಲ್ಲಾ ಕ್ಷೇತ್ರಗಳು ಮರು ಕಾರ್ಯಾರಂಭ ಮಾಡಲು ಲಸಿಕೆ ಪಡೆದಿರುವುದು ಕಡ್ಡಾಯ ನಿಯಮ ಮಾಡಿರುವ ಸರಕಾರ ಲಸಿಕೆ ನೀಡಲು ಮಾತ್ರ ವಿಫಲಗೊಂಡಿದೆ' ಎಂದು ದೂರಿದೆ.

`ಚೌಕಿದಾರ್ ಚೋರ್ ಹೈ' ಎನ್ನುವುದು ಎಂದೆಂದಿಗೂ ಸತ್ಯ! ದೇಶದ ರಕ್ಷಣೆಗೆ ಸಂಬಂಧಿಸಿದ ಒಪ್ಪಂದವನ್ನ ಸರಕಾರಕ್ಕೂ ಮೊದಲೇ ರಿಲಯನ್ಸ್ ಕಂಪೆನಿ ಮಾಡಿಕೊಳ್ಳುತ್ತದೆ ಎಂದರೆ ಏನರ್ಥ? ದೇಶದ ರಕ್ಷಣೆಯ ಹೊಣೆಯನ್ನು ರಿಲಯನ್ಸ್ ಕಂಪೆನಿಗೆ ವಹಿಸಲಾಗಿದೆಯೇ? `ಹಮ್ ದೋ ಹಮಾರೆ ದೋ' ಸರಕಾರ ಅದೆಷ್ಟೇ ಕಣ್ಕಟ್ಟು ನಡೆಸಿದರೂ ಸತ್ಯ ಎಂದಿಗೂ ಸತ್ಯವೇ ಆಗಿರುತ್ತದೆ'

-ಕಾಂಗ್ರೆಸ್ ಟ್ವೀಟ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News