ಪ್ರಧಾನಿ ಮೋದಿಗೆ ಮಾಹಿತಿ ಕೊರತೆ ಇದೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್
ಮೈಸೂರು,ಜು.4: ದುರಹಂಕಾರ ಮತ್ತು ಮಾಹಿತಿ ಕೊರತೆ ಇರುವುದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗಲ್ಲ, ಪ್ರಧಾನಿ ನರೇಂದ್ರ ಮೋದಿಯವರಿಗೆ ಮೊದಲು ಅವರಿಗೆ ದುರಹಂಕಾರ ಮತ್ತು ಮಾಹಿತಿ ಕೊರತೆಯ ವ್ಯಾಕ್ಸಿನ್ ಕಂಡು ಹಿಡಿದು ನೀಡಬೇಕಿದೆ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಆರ್.ಧ್ರುವನಾರಾಯಣ್ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆಗೆ ತಿರುಗೇಟು ನೀಡಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ರವಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಿರಿಯ ರಾಜಕಾರಣಿ ಅವರು ಇಂತಹ ಹೇಳಿಕೆ ನೀಡಬಾರದು. ಮೊದಲು ಅವರ ಜವಾಬ್ದಾರಿ ಅರಿತು ಮಾತನಾಡಬೇಕು. ರಾಹುಲ್ ಗಾಂಧಿ ಯವರಿಗೆ ದುರಹಂಕಾರ ಮತ್ತು ಮಾಹಿತಿ ಕೊರತೆ ಎಂಬ ಹೇಳಿಕೆಯನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಕೊರೋನ ಮೊದಲ ಅಲೆಯಲ್ಲೇ ಸಂಸತ್‍ನಲ್ಲಿ ಮಾತನಾಡಿ ಸರ್ಕಾರ ಮುನ್ನಚ್ಚರಿಕೆ ವಹಿಸಿವಂತೆ ಎಚ್ಚರಿಸಿದ್ದರು. ಆದರೆ ಅವರ ಹೇಳಿಕೆಯನ್ನು ಲಘುವಾಗಿ ಪರಿಗಣಿಸಲಾಯಿತು. ಇದರಿಂದ ದೇಶದಲ್ಲಿ ಲಕ್ಷಾಂತರ ಜನರು ಕೊರೋನಾದಿಂದ ಮೃತಪಡ ಬೇಕಾಯಿತು ಎಂದು ಹೇಳಿದರು.
ಕೊರೋನ ಎರಡನೇ ಅಲೆ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದ್ದ ಪ್ರಧಾನಿ ನರೇಂದ್ರ ಮೋದಿ, ಪಶ್ಚಿಮ ಬಂಗಾಳದಲ್ಲಿ ಲಕ್ಷಾಂತರ ಜನರನ್ನು ಸೇರಿಸಿ ಬೃಹತ್ ರ್ಯಾಲಿ ಮಾಡಿದರು. ಕುಂಬ ಮೇಳಕ್ಕೆ ಲಕ್ಷಾಂತರ ಜನರಿಗೆ ಅವಕಾಶ ಮಾಡಿಕೊಟ್ಟು. ದೇಶದ ಆರ್ಥಿಕ ಪರಿಸ್ಥಿತಿ ಕುಸಿದು ಇತರೆ ರಾಷ್ಟ್ರಗಳಿಗಿಂತಲೂ ಪಾತಾಳಕ್ಕೆ ಹೋಗುವಂತೆ ಅಗಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ದುರಹಾಂಕಾರದಿಂದ ಮತ್ತು ಮಾಹಿತಿ ಕೊರತೆಯಿಂದ ಆಗಿರುವುದು. ಹಾಗಾಗಿ ಮೊದಲು ಅವರಿಗೆ ವ್ಯಾಕ್ಸಿನ್ ನೀಡಬೇಕು ಎಂದು ಹೇಳಿದರು.