ಹಾಸನ: ಒಂದೇ ತಿಂಗಳಲ್ಲಿ ಎರಡು ಸೆಮಿಸ್ಟರ್ ಪರೀಕ್ಷೆಗೆ ವಿರೋಧ

Update: 2021-07-04 17:47 GMT

ಹಾಸನ, ಜು.4: ಒಂದೇ ತಿಂಗಳಲ್ಲಿ ಎರಡು ಸೆಮಿಸ್ಟರ್ ಪರೀಕ್ಷೆ ಹೇರಬೇಡಿ! ಒಂದೇ ಪರೀಕ್ಷೆ ನಡೆಸಿ ಎಂದು ಆಗ್ರಹಿಸಿ ರಾಜ್ಯಾದ್ಯಂತ ಆನ್‌ಲೈನ್ ತರಗತಿಯನ್ನು ಬಹಿಷ್ಕರಿಸಿ AIDSO ವಿದ್ಯಾರ್ಥಿ ಸಂಘಟನೆ ಮತ್ತು ವಿದ್ಯಾರ್ಥಿಗಳ ಹೋರಾಟ ಸಮಿತಿ ಹಾಸನ ಇವರ ನೇತೃತ್ವದಲ್ಲಿ ಸಾವಿರಾರು ಕಾಲೇಜುಗಳ ವಿದ್ಯಾರ್ಥಿಗಳು ಭಾಗಿಯಾಗಿ ಯಶಸ್ವಿಗೊಳಿಸಿದ್ದಾರೆ.

ಹಿಂದಿನ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸಬಾರದು ಮತ್ತು ಎರಡು ಡೋಸ್ ಉಚಿತ ಲಸಿಕೆ ಆಗುವವರೆಗೂ ಆಪ್‌ಲೈನ್ ತರಗತಿ ಅಥವಾ ಪರೀಕ್ಷೆಗಳು ನಡೆಯಬಾರದು ಎಂಬ ಕೂಗಿಗೆ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಸ್ಪಂದಿಸಿದ್ದಾರೆ.

ಇಂದು ಸ್ವಯಂಪ್ರೇರಿತವಾಗಿ ಆನ್‌ಲೈನ್ ತರಗತಿಗಳನ್ನು ಬಹಿಷ್ಕರಿಸಿದ್ದಾರೆ. ಹಾಸನದ ಹತ್ತಾರು ಕಾಲೇಜುಗಳಿಂದಲೂ ವಿದ್ಯಾರ್ಥಿಗಳು ತರಗತಿ ಬಹಿಷ್ಕಾರ ಮಾಡಿದ್ದು ಪ್ರಮುಖವಾಗಿ ಸರಕಾರಿ ಪಾಲಿಟೆಕ್ನಿಕ್ ಹೊಳೆನರಸೀಪುರ, ಸರಕಾರಿ ಮಹಿಳಾ ಪಾಲಿಟೆಕ್ನಿಕ್ ಹಾಸನ, ಸರಕಾರಿ ಪಾಲಿಟೆಕ್ನಿಕ್ ಬೇಲೂರು ಸೇರಿದಂತೆ ಮತ್ತೂ ಹಲವು ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಆನ್ಲೈನ್ ತರಗತಿಗಳಲ್ಲಿ ಹಾಜರಾಗದೆ, ಈ ತರಗತಿಗಳನ್ನು ಬಹಿಷ್ಕರಿಸುವ ಮೂಲಕ ಯಶಸ್ವಿಯಾಗಿ ಹೋರಾಟದಲ್ಲಿ ಭಾವಹಿಸಿದ್ದಾರೆ. ವಿದ್ಯಾರ್ಥಿಗಳ ಬೇಡಿಕೆಗೆ ಸರಕಾರ ಮತ್ತು ವಿವಿಗಳು ಸ್ಪಂದಿಸದಿದ್ದರೆ, ಇನ್ನೂ ತೀವ್ರ ಮಟ್ಟದ ಹೋರಾಟಕ್ಕೆ ವಿದ್ಯಾರ್ಥಿಗಳು ಸಜ್ಜಾಗುತ್ತೇವೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News