×
Ad

ಕೊಡಗು ಪ್ರವಾಸೋದ್ಯಮ ಅವಲಂಬಿತರ ಒಕ್ಕೂಟ ಅಸ್ತಿತ್ವಕ್ಕೆ

Update: 2021-07-05 23:06 IST

ಮಡಿಕೇರಿ ಜು.5 : ಕೊಡಗು ಪ್ರವಾಸೋದ್ಯಮ ಅವಲಂಬಿತರ ಒಕ್ಕೂಟ ನೂತನವಾಗಿ ಅಸ್ತಿತ್ವಕ್ಕೆ ಬಂದಿದ್ದು, ಅಧ್ಯಕ್ಷರಾಗಿ ಕೆ.ಕೆ.ಮಂಜುನಾಥ್ ಕುಮಾರ್ ಆಯ್ಕೆಯಾಗಿದ್ದಾರೆ.

ಪ್ರಧಾನ ಕಾರ್ಯದರ್ಶಿಯಾಗಿ ಕೆ.ಶಿವಕುಮಾರ್, ಜಂಟಿ ಕಾರ್ಯದರ್ಶಿ ಎಂ.ಬಿ.ಮಂಜುನಾಥ್, ಉಪಾಧ್ಯಕ್ಷ ಕೆ.ವರದ, ಸಂಘಟನಾ ಕಾರ್ಯದರ್ಶಿ ಲಕ್ಷ್ಮೀನಾರಾಯಣ, ಸಲಹಾ ಸಮಿತಿ ಸದಸ್ಯರುಗಳಾಗಿ ಆರ್.ಕೆ.ಭಟ್, ಮಿತ್ರ, ಗೌರವ ನಿರ್ದೇಶಕರುಗಳಾಗಿ ಸಿ.ಎಲ್.ವಿಶ್ವ ಹಾಗೂ ಎಲ್ಲಾ ಪೂರಕ ಸಂಘಟನೆಗಳ ಪದನಿಮಿತ್ತ ಅಧ್ಯಕ್ಷರುಗಳು ನೇಮಕಗೊಂಡಿದ್ದಾರೆ. 

ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ, ಪ್ರವಾಸಿ ಕ್ಷೇತ್ರದ ಗುಣಮಟ್ಟ ಕಾಪಾಡುವುದು, ರೆಸಾರ್ಟ್, ಲಾಡ್ಜ್, ಹೊಟೇಲ್, ಹೋಂಸ್ಟೇ ಸೇರಿದಂತೆ ಸ್ಪೈಸಸ್ ಹಾಗೂ ಇತರೆ ಅಂಗಡಿಗಳು, ಟ್ಯಾಕ್ಸಿ, ಕಾರು, ಜೀಪ್, ಆಟೋ ಮತ್ತು ಪ್ರವಾಸಿ ವಾಹನಗಳ ಮಾಲೀಕರುಗಳು, ಚಾಲಕರು ಕಾರ್ಮಿಕರ ಶ್ರೇಯೋಭಿವೃದ್ಧಿ, ಪ್ರವಾಸಿಗರ ಸುರಕ್ಷತೆಗೆ ಪೂರಕವಾದ ಕ್ರಮಗಳನ್ನು ಕೈಗೊಳ್ಳಲು ನೂತನ ಒಕ್ಕೂಟವನ್ನು ರಚಿಸಿರುವುದಾಗಿ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News