ದಾಖಲಿತ ಕೊರೋನ ಸಾವು 40 ಲಕ್ಷ, ಆದರೆ ಅದು ಕನಿಷ್ಠ ಸಂಖ್ಯೆ: ವಿಶ್ವ ಆರೋಗ್ಯ ಸಂಸ್ಥೆ

Update: 2021-07-08 16:22 GMT

ಜಿನೀವ (ಸ್ವಿಟ್ಸರ್ಲ್ಯಾಂಡ್), ಜು. 8: ಜಗತ್ತಿನಾದ್ಯಂತ ಕೋವಿಡ್-19 ಸಾಂಕ್ರಾಮಿಕದಿಂದ 40 ಲಕ್ಷಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಬುಧವಾರ ತಿಳಿಸಿದೆ.

ಹಲವು ಶ್ರೀಮಂತ ದೇಶಗಳು ಕೊರೋನ ವೈರಸ್ ಸಂಬಂಧಿ ನಿರ್ಬಂಧಗಳನ್ನು ಸಡಿಲಿಸಲು ಸಿದ್ಧತೆಗಳನ್ನು ನಡೆಸುತ್ತಿರುವಂತೆಯೇ, ಏಶ್ಯದಲ್ಲಿನ ದೇಶಗಳು ಹೊಸದಾಗಿ ಹೆಚ್ಚುತ್ತಿರುವ ಸೋಂಕು ಪ್ರಕರಣಗಳ ವಿರುದ್ಧ ಹೋರಾಡುತ್ತಿವೆ. ಏಶ್ಯಾದ್ಯಂತ ಲಕ್ಷಾಂತರ ಮಂದಿ ಹೊಸ ಲಾಕ್ಡೌನ್ಗಳನ್ನು ಎದುರು ನೋಡುತ್ತಿದ್ದಾರೆ ಹಾಗೂ ಇಂಡೋನೇಶ್ಯ ಸಾಂಕ್ರಾಮಿಕದ ಹೊಸ ಕೇಂದ್ರ ಸ್ಥಾನವಾಗಿ ಹೊರಹೊಮ್ಮಿದೆ.

‘‘ಈ ಸಾಂಕ್ರಾಮಿಕದ ಅವಧಿಯಲ್ಲಿ ಜಗತ್ತು ಸಂಕಷ್ಟ ಬಿಂದುವಿನಲ್ಲಿದೆ’’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರಾಸ್ ಅದನಾಮ್ ಗೇಬ್ರಿಯೇಸಸ್ ಹೇಳಿದ್ದಾರೆ. ಈಗ ವರದಿಯಾಗಿರುವ 40 ಲಕ್ಷ ಸಾವು ಕನಿಷ್ಠ ಸಂಖ್ಯೆಯಾಗಿದೆ ಎಂದರು.

ಲಸಿಕೆಗಳು ಮತ್ತು ಸುರಕ್ಷಾ ಸಾಮಗ್ರಿಗಳನ್ನು ದಾಸ್ತಾನು ಮಾಡುತ್ತಿರುವುದಕ್ಕಾಗಿ ಅವರು ಶ್ರೀಮಂತ ದೇಶಗಳನ್ನು ಟೀಕಿಸಿದರು. ಅದೇ ವೇಳೆ, ನಿರ್ಬಂಧಗಳನ್ನು ಸಡಿಲಿಸುವ ಮೂಲಕ ಸಾಂಕ್ರಾಮಿಕವು ಈಗಾಗಲೇ ಮುಗಿದಿದೆ ಎಂಬಂತೆ ಈ ದೇಶಗಳು ವರ್ತಿಸುತ್ತಿವೆ ಎಂದು ಅವರು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News