×
Ad

ವೃತ್ತಿಪರ ಸೀಟುಗಳ ಆಯ್ಕೆ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ

Update: 2021-07-09 17:04 IST

ಬೆಂಗಳೂರು, ಜು. 9: ಜು.10ರಂದು ಅಂತ್ಯಗೊಳ್ಳಲಿದ್ದಂತಹ ಸಿಇಟಿ-2021ರ ವೃತ್ತಿಪರ ಕೋರ್ಸ್‍ಗಳ ಸೀಟುಗಳ ಆಯ್ಕೆಗಾಗಿ ನಡೆಯುವಂತಹ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಜು.16ರ ವರೆಗೆ ವಿಸ್ತರಣ ಮಾಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

ಸಿಇಟಿ-2021ರ ವಿವಿಧ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು, ಅನೇಕ ವಿದ್ಯಾರ್ಥಿಗಳು, ಫೋಷಕರು ಅರ್ಜಿ ಸಲ್ಲಿಸಲು ಅವಕಾಶ ನೀಡಲು ಕೋರಿರುವುದರಿಂದ, ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಧಿ ವಿಸ್ತರಿಸಲಾಗಿದೆ.

​ವೃತ್ತಿಪರ ಕೋರ್ಸ್‍ಗಳ ಪ್ರವೇಶಾತಿಗಾಗಿ ಸಿಇಟಿ-2021ಕ್ಕೆ ನೊಂದಣಿ ಮಾಡಿಕೊಳ್ಳದೆ ಇರುವ ವಿದ್ಯಾರ್ಥಿಗಳು ಜು.16ರ ವರೆಗೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿ ಹಾಗೂ ಶುಲ್ಕವನ್ನು ಜು.19ರ ವರೆಗೆ ಪಾವತಿಸಬಹುದಾಗಿ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News