×
Ad

ರಾಜ್ಯದಲ್ಲಿ ಪೊಲೀಸ್ ಇಲಾಖೆ ಬಿಜೆಪಿಯ `ಖಾಕಿ ಮೋರ್ಚಾ': ಕಾಂಗ್ರೆಸ್ ಲೇವಡಿ

Update: 2021-07-09 17:15 IST

ಬೆಂಗಳೂರು, ಜು. 9: `ರಾಜ್ಯದಲ್ಲಿ ಪೊಲೀಸ್ ಇಲಾಖೆ ಬಿಜೆಪಿಯ `ಖಾಕಿ ಮೋರ್ಚಾ' ಎಂಬಂತೆನಾದರೂ ಆಗಿದೆಯೇ ಎಂದು ಅನುಮಾನ ಮೂಡುತ್ತಿದೆ! ಬಿಜೆಪಿಯ ಅತ್ಯಾಚಾರ ಆರೋಪಿಗೆ ರಾಜಮರ್ಯಾದೆ ಕೊಡಲಾಗುತ್ತಿದೆ, ಸಚಿವರ ವಂಚಕ ಪಿಎಯನ್ನು ಎಫ್‍ಐಆರ್ ಆಗಿದ್ದರೂ ಬಿಟ್ಟು ಕಳಿಸಲಾಗುತ್ತದೆ. ಮಾನವ ಹಕ್ಕನ್ನು ಉಲ್ಲಂಘಿಸಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲಾಗುತ್ತಿದೆ' ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.

ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, `ಬಿಜೆಪಿ ಸರಕಾರದಲ್ಲಿ ಪೊಲೀಸರು ಬಿಜೆಪಿ ನಾಯಕರ ಅಣತಿಯಂತೆ ಕೆಲಸ ಮಾಡುತ್ತಿರುವುದು ಸ್ಪಷ್ಟ. ಬಿಜೆಪಿ ಕುಮ್ಮಕ್ಕಿನಿಂದ ಕಾರ್ಕಳದ ಕಾಂಗ್ರೆಸ್ ಕಾರ್ಯಕರ್ತ ರಾಧಾಕೃಷ್ಣ ನಾಯಕ್ ಮೇಲಿನ ಪೊಲೀಸ್ ದೌರ್ಜನ್ಯ ಖಂಡನೀಯ. ಅನಾರೋಗ್ಯವನ್ನೂ ಲೆಕ್ಕಿಸದೆ ಅಮಾನವೀಯವಾಗಿ ಹಲ್ಲೆ ನಡೆಸಿದ ಪೊಲೀಸರನ್ನು ಕೊಡಲೇ ಅಮಾನತುಗೊಳಿಸಬೇಕು' ಎಂದು ಆಗ್ರಹಿಸಿದೆ.

`ಜನ ವಿರೋಧ ಜಾಸ್ತಿಯಾದಾಗಲೆಲ್ಲ ತಮ್ಮ ಸುಳ್ಳಿನ ಗುಚ್ಛಕ್ಕೆ `ಪ್ಯಾಕೇಜ್' ಎಂದು ಹೆಸರಿಟ್ಟುಕೊಳ್ಳುತ್ತದೆ ಕೇಂದ್ರದ ಬಿಜೆಪಿ ಸರಕಾರ! 7 ವರ್ಷಗಳಲ್ಲಿ ಘೋಷಣೆಯಾದ ಹಲವು ಪ್ಯಾಕೇಜ್‍ಗಳು ಎಲ್ಲಿ ಹೋದವೋ ದೇವರಿಗೆ ತಿಳಿದಿದೆ! ಕಳೆದ ವರ್ಷದ 2 ಲಕ್ಷ ಕೋಟಿ ರೂ.ಪ್ಯಾಕೇಜ್‍ನಂತೆಯೇ ಈಗಿನ 23 ಸಾವಿರ ಕೋಟಿ ರೂ.ಪ್ಯಾಕೇಜ್ ಕೂಡ `ಬಾಯಿ ಮಾತಿನ ಬೊಗಳೆ' ಅಷ್ಟೇ'

-ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News