ತುಮಕೂರು: ಕಾರ್ಮಿಕರಿಗೆ ಕೋವಿಡ್ ಪರಿಹಾರ, ಎಸ್ಮಾಹಿಂಪಡೆಯಲು ಸಿಐಟಿಯು ಒತ್ತಾಯ

Update: 2021-07-09 18:20 GMT

ತುಮಕೂರು,ಜು.09: ಕರೋನ ಹಿನ್ನೆಲೆಯಲ್ಲಿ 3 ಕೋಟಿಯಷ್ಟು ಜನ ಅಸಂಘಟಿತ ವಲಯದಲ್ಲಿ ಎಲ್ಲಾ ಕಾರ್ಮಿಕರಿಗೆ  ಆರ್ಥಿಕ ನೆರವು ಪ್ರಕಟಿಸಬೇಕು ಹಾಗೂ, ಕಟ್ಟಡ ಕಾರ್ಮಿಕರಿಗೆ ಕೋವಿಡ್ ಪರಿಹಾರ ಹೆಚ್ಚಿಸಬೇಕು ಎಂದು ಒತ್ತಾಯಿಸಿ ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ  ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಅವರು, ನ್ಯಾಯಾಲಯಗಳು ಕಾನೂನು ಸೇವಾ ಪ್ರಾಧಿಕಾರಗಳು ಮಧ್ಯ ಪ್ರವೇಶಿಸಿ ವಲಸೆ/ ಅಸಂಘಟಿತ ಕಾರ್ಮಿಕರಿಗೆ ಆಹಾರ ಕಿಟ್‍ಗಳನ್ನು ನೀಡಬೇಕೆಂಬ ನಿರ್ದೆಶನ ನೀಡಿದೆ ಅದರಂತೆ ಎಲ್ಲರಿಗೂ ರೇಷನ್ ಕಿಟ್ ನೀಡಬೇಕು  ಆಹಾರ ಕಿಟ್ ಖರೀದಿಯಲ್ಲಿ  ಭ್ರಷ್ಟಾಚಾರ ಹಿನ್ನಲೆಯಲ್ಲಿ ಮಂಡಳಿಯಲ್ಲಿ ಇತ್ತೀಚೆಗೆ ಕೈಗೊಂಡಿರುವ, ತಂತ್ರಾಂಶ ಟೂಲ್ ಕಿಟ್, ತಂತ್ರಾಂಶ ಟೆಂಡರ್, ಆ್ಯಂಬುಲೆನ್ಸ್ ಗಳು ಹಾಗೂ ಆಹಾರ ಕಿಟ್, ಔಷಧಿ ಕಿಟ್‍ಗಳ ಖರೀದಿ ಕುರಿತಾಗಿ ತನಿಖೆ ನಡಸಬೇಕು ಎಂದು ಒತ್ತಾಯಿಸಿದರು.

ಮನೆ ಕೆಲಸಗಾರರು ‘ಮಾಲಿಕರಿಂದ ಪ್ರಮಾಣ ಪತ್ರ ತರಬೇಕೆಂಬ’ ಷರತ್ತು ಕಾರ್ಮಿಕ ಇಲಾಖೆ ವಿಧಿಸಿದೆ ಇದರಿಂದ ಸಾವಿರಾರು ನೈಜ ಕಾರ್ಮಿಕ ಮಹಿಳೆಯರು ಹಣಕಾಸಿನ ನೆರವು ಮತ್ತು ಇತರೆ ಸೌಲಭ್ಯ ಗಳಿಂದ ವಂಚಿತರಾಗುವ ಅಪಾಯ ಬಂದಿದೆ. ಹೀಗಾಗಿ ಕಾರ್ಮಿಕ ಸಂಘಟನೆಗಳು ನೀಡುವ ಉದ್ಯೋಗ ಪ್ರಮಾಣ ಪತ್ರವನ್ನು ಮಾನ್ಯ ಮಾಡಿ ನೋಂದಾವಣೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಆರ್ಥಿಕ ಭದ್ರತೆ: ಕೊವೀಡ್ ನಿಯಂತ್ರಣಕ್ಕಾಗಿ ಜೀವ ಒತ್ತೆ ಇಟ್ಟು ಕೆಲಸ ಮಾಡುತ್ತಿರುವವರು ಕೊವೀಡ್ ವಾರಿಯರ್ಸ್‍ಗಳು. ಆರೋಗ್ಯ ಕಾರ್ಯಕರ್ತರು, ಆಶಾ, ಅಂಗನವಾಡಿ, ಗ್ರಾಮ ಪಂಚಾಯ್ತಿ, ಮುನ್ಸಿಫಲ್ ಮತ್ತು ಗ್ರಾಮ ಪಂಚಾಯ್ತಿ ನೌಕರರು    ಮರಣ ಹೊಂದಿರುವ ಎಲ್ಲ ಕೊವೀಡ್ ವಾರಿಯರ್ಸ್‍ಗಳಿಗೂ ಆರ್ಥಿಕ ಭದ್ರತೆ ಸಿಗುವಂತೆ ವ್ಯವಸ್ಥೆ ಮಾಡಬೇಕು. ಸಾರಿಗೆ ನೌಕರರ ಮೇಲೆ ಎಸ್ಮಾಕಾನೂನು ವಿಸ್ತರಣೆ ರದ್ದು ಮಾಡಿ sಸಾರಿಗೆ ನೌಕರರ ನ್ಯಾಯ ಸಮ್ಮತ ಹಕ್ಕೊತ್ತಾಯಗಳನ್ನು  ಪರಿಗಣಿ ಸಬೇಕು ಎಂದು ತಿಳಿಸಿದರು.

ಕೋಟ್ಯಂತರ ಅಸಂಘಟಿತರನ್ನು ಮನೆಯಲ್ಲಿ ಬಂದ್ ಮಾಡಿದ ಸರ್ಕಾರ ಆದಾಯ ಇಲ್ಲದೆ ಮನೆಬಾಡಿಗೆ, ಕರೆಂಟ್ ಬಿಲ್ ಗೆ ಪರದಾಡುವಂತೆ ಮಾಡಿದೆ. ನಿರಂತರ ಎಲ್ಲಾ ಅಗತ್ಯ ವಸ್ತುಗಳ ಬೆಲೆಗಳ ಹೆಚ್ಚಿಸಿದೆ. ಸರ್ಕಾರದ ಪರಿಹಾರ ಆನೆ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ ಎನ್ನುವ ಹಾಗೆ ಏನೇನು ಸಾಲದು ಎಂದರು.

ಜಿಲ್ಲಾಧಿಕಾರಿಗಳ ಕಛೇರಿ ಬಳಿ ಸಮಾವೇಶಗೊಂಡ ಪ್ರತಿಭಟನಾಕಾರರು, ಕಾರ್ಮಿಕ ಅಧಿಕಾರಿಗಳ  ಕಛೇರಿ  ತನಕ  ಮೆರವಣಿಗೆ ನಡೆಸಿ ಪ್ರತಿಭಟಿಸಲಾಯಿತು.

ಸಿಐಟಿಯು ಜಿಲ್ಲಾ ಪ್ರಧಾನ  ಕಾರ್ಯದರ್ಶಿ ಜಿ. ಕಮಲ, ಖಜಾಂಚಿ ಎ.ಲೋಕೇಶ್,ಎನ್.ಕೆ.ಸುಬ್ರಮಣ್ಯ, ಕಟ್ಟಡ ಕಾರ್ಮಿಕರ ಸಂಘ ಜಿಲ್ಲಾಧ್ಯಕ್ಷ ಬಿ.ಉಮೇಶ್, ಮನೆ ಕೆಲಸಗಾರರ ಸಂಘದ ಅನುಸೂಯ, ಪುಟ್‍ಪಾತ್ ವ್ಯಾಪಾರಿಗಳ ಸಂಘದ ವಸೀಂ ಅಕ್ರಂ, ಜಿಲ್ಲಾ ಬೀಡಿ ಕಾರ್ಮಿಕರ ಸಂಘದ ಶಾಹತಾಜ್ ಸುಜಿತ್ ನಾಯಕ್, ಆಟೋ ರಿಕ್ಷಾ ಡೈವರ್ಸ್ ಯೂನಿಯನ್ ಸಂಘದ ಸಿದ್ದರಾಜು, ಇಂತು, ಮಾತಾಡಿದರು. ಹೋರಾಟದಲ್ಲಿ  ವೆಂಡಿಂಗ್ ಸಮಿತಿ ಸದಸ್ಯರಾದ ರಾಜ ಶೇಖರ್, ಮುತ್ತುರಾಜ್, ರವಿ, ಜಗದೀಶ್ ಇತರರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News