ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಗದ ಲಸಿಕೆ ಶಾಸಕರ ಕಚೇರಿಯಲ್ಲಿ ಸಿಗುತ್ತಿರುವುದು ಹೇಗೆ?: ಕುಸುಮಾ ಹನುಮಂತರಾಯಪ್ಪ

Update: 2021-07-11 18:04 GMT

ಬೆಂಗಳೂರು, ಜು.11: ಸರಕಾರಿ ಆಸ್ಪತ್ರೆಗಳಲ್ಲಿ ಸಿಗಬೇಕಿದ್ದ ಉಚಿತ ಲಸಿಕೆಗಳನ್ನು ಆರ್.ಆರ್ ನಗರ ಕ್ಷೇತ್ರದ ಜನತೆಗೆ ಶಾಸಕರ ಕಚೇರಿಯಲ್ಲಿ ಟೋಕನ್ ಪಡೆದು ಲಸಿಕೆ ಹಾಕಿಸಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ ಎಂದು ಆರ್.ಆರ್ ನಗರ ಕ್ಷೇತ್ರದ ಕಾಂಗ್ರೆಸ್ ನ ಮಾಜಿ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಅವರು ತಿಳಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಉಚಿತವಾಗಿ ಸಿಗಬೇಕಿರುವ ಲಸಿಕೆಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ಟಾಕ್ ಇಲ್ಲ. ಹಾಗಾದರೆ ಶಾಸಕರ ಕಚೇರಿಯಲ್ಲಿ ಸಿಗುತ್ತಿರುವುದಾದರೂ ಹೇಗೆ? ಎಂದು ಪ್ರಶ್ನಿಸಿದ್ದಾರೆ.

ಲಸಿಕೆ ನೀಡುವಲ್ಲಿಯೂ ರಾಜಕೀಯ ಬಣ್ಣ ಬೆರೆಸುವಂತೆ ಹೇಳಿ ನಿಮ್ಮ ಪಕ್ಷದ ಶಾಸಕರ ಕೈಲಿ ಇಂತಹ ಕೃತ್ಯ ಮಾಡಿಸಲಾಗುತ್ತಿದೆಯಾ?ಬಿಜೆಪಿ ಸರ್ಕಾರದ ಕೃಪಾಪೋಷಿತವಿಲ್ಲದೇ ಉಚಿತ ಲಸಿಕೆಗೆ ಇಷ್ಟು ರಾಜಾರೋಷವಾಗಿ ತಮ್ಮ ಫೋಟೋ ಮತ್ತು ಟ್ಯಾಗ್ ಹಾಕಿ‌ ಟೋಕನ್ ಹಂಚಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ. 


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News