ನಾಗರಿಕ ಜವಾಬ್ದಾರಿ ಹೆಚ್ಚಿಸಲು `ಯೂತ್ ಕ್ಯಾನ್ ಲೀಡ್' ಅಭಿಯಾನ ಹೆಚ್ಚಾಗಬೇಕು: ಸಂಸದ ತೇಜಸ್ವಿ ಸೂರ್ಯ

Update: 2021-07-11 17:28 GMT

ಬೆಂಗಳೂರು, ಜು. 11: `ನಾಗರಿಕರಲ್ಲಿ ಸರಕಾರದ ಯೋಜನೆಗಳು, ಸಾರ್ವಜನಿಕ ಜವಾಬ್ದಾರಿ ಹೆಚ್ಚಿಸಲು ಬೆಂಗಳೂರು ದಕ್ಷಿಣ ಸಂಸದರ ಕಚೇರಿ ವತಿಯಿಂದ `ಯೂತ್ ಕ್ಯಾನ್ ಲೀಡ್' ಅಭಿಯಾನ ಆರಂಭಿಸಲಾಗಿದ್ದು, 2 ತಿಂಗಳುಗಳ ಅವಧಿಯ ಈ ಕಾರ್ಯಕ್ರಮದಲ್ಲಿ ಅರ್ಹ ಅಭ್ಯರ್ಥಿಗಳಿಗೆ ಸರಕಾರಿ ಆಡಳಿತ ಯಂತ್ರದ ಹಲವು ಮಜಲುಗಳು, ನೀತಿ-ನಿರೂಪಣೆಯ ವಿಧಾನ, ಸರಕಾರಿ ಯೋಜನೆಗಳ ಕುರಿತಾದ ಸರ್ವೇ ಸೇರಿದಂತೆ ಹಲವು ರೀತಿಯ ಮಾಹಿತಿಯನ್ನು ಕ್ಷೇತ್ರ ಭೇಟಿ ಮೂಲಕ ತಜ್ಞರಿಂದ ತಿಳಿಸಿಕೊಡಲು ಪ್ರಯತ್ನಿಸಲಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ.

ರವಿವಾರ ಈ ಸಂಬಂಧ ಮಾತನಾಡಿದ ಅವರು, `ಸರಕಾರದ ಭಾಗವಾಗಿ ನಾವೆಲ್ಲರೂ ಮಾಡಬೇಕಾದ ಕರ್ತವ್ಯಗಳು, ಜವಾಬ್ದಾರಿಗಳ ಕುರಿತಾಗಿ ಈ ಅಭಿಯಾನದಲ್ಲಿ ಸಂಪೂರ್ಣ ತರಬೇತಿ ನೀಡಲಾಗಿದ್ದು, ಇಂತಹ ಕಾರ್ಯಕ್ರಮಗಳಿಂದ ಸಾಮಾಜಿಕ ಪರಿವರ್ತನೆಗೆ ನಾಂದಿಯಾಗಲಿದೆ' ಎಂದು ಇದೇ ಸಂದರ್ಭದಲ್ಲಿ ಆಶಯವನ್ನು ವ್ಯಕ್ತಪಡಿಸಿದರು.

ಪತ್ರಕರ್ತ ರವಿ ಹೆಗಡೆ ಮಾತನಾಡಿ, `ಇಂತಹ ಕಾರ್ಯಕ್ರಮಗಳಿಂದ ನಾಗರಿಕರಲ್ಲಿ ಸಾಮಾಜಿಕ ಜವಾಬ್ದಾರಿ ಹೆಚ್ಚಿಸುವ ಕಾರ್ಯವಾಗಲಿದ್ದು, ಇಂತಹ ವಿನೂತನ ಅಭಿಯಾನ ಆರಂಭಿಸಿರುವ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಕಾರ್ಯವನ್ನು ನಾನು ಶ್ಲಾಘನೀಯ' ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಯೂತ್ ಕ್ಯಾನ್ ಲೀಡ್‍ನ ಅಭ್ಯರ್ಥಿಗಳು ತಮ್ಮ ಅನುಭವ, ಕ್ಷೇತ್ರ ಭೇಟಿ, ಸಾಮಾಜಿಕ ಪರಿವರ್ತನೆಗೆ ಇಂತಹ ಕಾರ್ಯಕಮಗಳು ಹೇಗೆ ಸಹಾಯಕಾರಿ ಎನ್ನುವುದನ್ನು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News