×
Ad

ಪಾಂಡವಪುರ: ಪತ್ರಕರ್ತ ಅಂಥೋಣಿ ಹೃದಯಾಘಾತದಿಂದ ನಿಧನ

Update: 2021-07-12 20:26 IST

ಪಾಂಡವಪುರ, ಜು.12: ಪಟ್ಟಣದ ವಿ.ಸಿ.ಕಾಲನಿಯ ನಿವಾಸಿ, ಪತ್ರಕರ್ತ ಅಂಥೋಣಿ ರಾಬರ್ಟ್‍ರಾಜ್(52) ಸೋಮವಾರ ಹೃದಯಾಘಾತದಿಂದ ನಿಧನರಾದರು.

ಬೆಳಗ್ಗೆ ಕಾರ್ಮಿಕ ಇಲಾಖೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಲಘು ಹೃದಯಾಘಾತಕ್ಕೊಳಗಾದ ಅಂಥೋಣಿ ಅವರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಜಯದೇವ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗಿದೆ ಮೃತಪಟ್ಟರು. 

ಪತ್ರಿಕೋದ್ಯಮದ ಜತೆಗೆ ವಿಕ್ರಾಂತ್ ಕಾರ್ಖಾನೆಯ ಉದ್ಯೋಗಿಯಾಗಿದ್ದರು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಖಜಾಂಚಿಯಾಗಿದ್ದರು. ಶಾಸಕ ಸಿ.ಎಸ್.ಪುಟ್ಟರಾಜು, ತಾಲೂಕು ಪತ್ರಕರ್ತರ ಸಂಘವು ತೀವೃ ಸಂತಾಪ ಸೂಚಿಸಿದೆ.

ಮೃತರಿಗೆ ಪತ್ನಿ, ಇಬ್ಬರು ಗಂಡುಮಕ್ಕಳು ಇದ್ದಾರೆ. ಮೃತರ ಅಂತ್ಯಕ್ರಿಯೆಯೂ ಮಂಗಳವಾರ ಬೆಳಗ್ಗೆ 11 ಗಂಟೆಗೆ ಪಟ್ಟಣದ ಕ್ರಿಶ್ಚಿಯನ್ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News