ಶಿವಮೊಗ್ಗ : ಗ್ರಾಮಾಂತರ ಶಾಲಾ ಆವರಣದಲ್ಲಿ ವನಮಹೋತ್ಸವ
ಶಿವಮೊಗ್ಗ,ಜು.13:ರೋಟರಿ ಶಿವಮೊಗ್ಗ ಪೂರ್ವದ ಸಂಸ್ಥೆ ವತಿಯಿಂದ ಆಯುರ್ವೇದ ಔಷಧೀಯ ಗುಣವುಳ್ಳ ಐದು ಸಾವಿರ ಗಿಡಗಳನ್ನು ನೆಡುವ ಉದ್ದೇಶವಿದೆ ಎಂದು ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಮಂಜುನಾಥ್ ಕದಂ ಹೇಳಿದರು.
ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯ ವತಿಯಿಂದ ಗ್ರಾಮಾಂತರ ಶಾಲೆಗಳ ಆವರಣದಲ್ಲಿ ಔಷಧೀಯ ಗುಣವುಳ್ಳ ಸಸಿಗಳನ್ನು ನೆಡುವ ಮೂಲಕ ಮುಖಾಂತರ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಈವರೆಗೂ ಒಂದು ಸಾವಿರ ಸಸಿಗಳನ್ನು ನೆಡಲಾಗಿದ್ದು, ಅದರ ಪೋಷಣೆಯ ಜವಾಬ್ದಾರಿಯನ್ನು ರೋಟರಿ ಶಿವಮೊಗ್ಗ ಪೂರ್ವವಹಿಸಿಕೊಂಡಿದೆ ಎಂದು ತಿಳಿಸಿದರು.
ಸಂಸ್ಥೆಯ ಸದಸ್ಯೆ ಸುಮತಿ ಕುಮಾರಸ್ವಾಮಿ ಅವರು ರಾಜ್ಯ ಶಿಕ್ಷಕರ ಸಂಘದ ಕಾರ್ಯಕಾರಿ ಮಂಡಳಿಸದಸ್ಯರಾಗಿ ಗ್ರಾಮಾಂತರ ಕ್ಲಸ್ಟರ್ ಒಳಪಡುವ 12 ಶಾಲೆಗಳಿಗೆ ಒಂದು ಶಾಲೆಗೆ ೫೦ ಸಸಿಗಳಂತೆಯೇ 600 ಆಯುರ್ವೇದ ಔಷಧೀಯ ಗುಣವುಳ್ಳ ಸಸಿಗಳನ್ನು ವಿಸ್ತರಣೆ ಮಾಡಿದ್ದು, ಅವುಗಳ ಪೋಷಣೆ ಮತ್ತು ಜವಾಬ್ದಾರಿಯನ್ನು ಶಾಲಾ ವರ್ಗಕ್ಕೆ ವಹಿಸಿ ಉಸ್ತುವಾರಿಯನ್ನು ರೋಟರಿ ಶಿವಮೊಗ್ಗ ಪೂರ್ವವಹಿಸಿಕೊಳ್ಳಲಿದೆ ಎಂದರು.
ಶಾಲಾ ಆವರಣದಲ್ಲಿ ಔಷಧೀಯ ಗುಣಗಳುಳ್ಳ ಸಸಿಗಳನ್ನು ನೆಡುವುದರಿಂದ ಶಾಲೆಯ ಮಕ್ಕಳಿಗೆ ಗಿಡಗಳ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯುತ್ತದೆ.ಮುಂದಿನ ದಿನಗಳಲ್ಲಿ ಇನ್ನೂ ನಾಲ್ಕು ಸಾವಿರ ಸಸಿಗಳನ್ನು ನೆಡುವ ಉದ್ದೇಶವಿದ್ದು ಅದಕ್ಕೆ ಸ್ಥಳಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.
ನಿವೃತ್ತ ಡಿಎಫ್‌ಒಮಂಜುನಾಥ್ ಮಾತನಾಡಿ, ಶಾಲಾ ಮಕ್ಕಳಿಗೆ ಮತ್ತು ಸಿಬ್ಬಂದಿಗೆ ಗಿಡಗಳ ಬಗ್ಗೆ ವಿವರಣೆ ನೀಡಿದ್ದು ರೋಟರಿ ಸಂಸ್ಥೆಯು ವನಮೋತ್ಸವ ಮಾಡುವುದು ಒಳ್ಳೆಯ ಉದ್ದೇಶವಾಗಿದೆ. ಅದರಲ್ಲೂ ಔಷಧೀಯ ಗುಣವುಳ್ಳ ಸಸಿಗಳನ್ನು ಆಯ್ಕೆ ಮಾಡಿ ಸಸಿಗಳನ್ನು ನೀಡುವುದರಿಂದ ಹಲವಾರು ಪ್ರಯೋಜನಗಳು ಮತ್ತು ಆಮ್ಲಜನಕಕ್ಕೆ ಅನುಕೂಲವಾಗಿದೆ ಎಂದು ತಿಳಿಸಿದರು.
ರೋಟರಿಯನ್ ಸುಮತಿ ಕುಮಾರಸ್ವಾಮಿ ಮಾತನಾಡಿ, ಈಗಾಗಲೇ ಕೊಮ್ಮನಾಳ ಸರ್ಕಾರಿ ಶಾಲೆ ಮತ್ತು ಬೂದಿಗೆರೆ ಸರ್ಕಾರಿ ಶಾಲೆ ಹಾಗೂ ಬೀರನಕೆರೆ ಸರ್ಕಾರಿ ಶಾಲೆಗೆ ಹಾಗೂ ಇತರೆ ಶಾಲೆಗಳಲ್ಲಿ ಸಸಿಗಳನ್ನು ನೆಟ್ಟಿದ್ದು,ಈವರೆಗೂ ಸಾವಿರ ಸಸಿಗಳು ಆಗಿದೆ.ಇನ್ನು ಮುಂದೆ ಅನೇಕ ಗ್ರಾಮಾಂತರ ಶಾಲೆಗಳಲ್ಲಿ ಸಸಿಗಳನ್ನು ನೆಟ್ಟು ಪೋಷಣೆ ಮಾಡಲಾಗುವುದು ಎಂದು ತಿಳಿಸಿದರು.
ರೋಟರಿ ಶಿವಮೊಗ್ಗ ಪೂರ್ವದ ಕಾರ್ಯದರ್ಶಿ ಸತೀಶ್‌ಚಂದ್ರ, ಕುಮಾರಸ್ವಾಮಿ, ಶಾಲೆಯ ಮುಖ್ಯಸ್ಥೆ ಗೀತಾ, ಸಹ ಶಿಕ್ಷಕರಾದ ಭುವನೇಂದ್ರ, ಮಾಣಿಕ್ಯಮ್ಮ ಹಾಗೂ ಎಸ್‌ಡಿಎಂಸಿ ಸದಸ್ಯರಾದರ, ಬೂದಿಗೆರೆ ಮುಖ್ಯ ಶಿಕ್ಷಕಿ ರೇಣುಕಮ್ಮ, ಸಹ ಶಿಕ್ಷಕರಾದ ಛಾಯಾ ಹಾಗೂ ಇತರೆ ಸದಸ್ಯರು ಉಪಸ್ಥಿತರಿದ್ದರು.