ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಆನ್‍ಲೈನ್‍ನಲ್ಲಿ ಪರೀಕ್ಷಾ ಶುಲ್ಕ ಕಟ್ಟಲು ಅವಕಾಶ

Update: 2021-07-14 12:02 GMT

ಬೆಂಗಳೂರು, ಜು.14: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 2001-02 ರಿಂದ 2014-15 ಹಾಗೂ 2018-19 ರಿಂದ 2020-21ನೇ(ಜುಲೈಆವೃತ್ತಿ) ಶೈಕ್ಷಣಿಕ ಸಾಲಿನಲ್ಲಿ ಪ್ರವೇಶಾತಿ ಪಡೆದ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ವಾರ್ಷಿಕ ಹಾಗೂ ಸೆಮಿಸ್ಟರ್ ಪರೀಕ್ಷೆಗಳಿಗೆ ಆನ್‍ಲೈನ್ ಮೂಲಕ ಪರೀಕ್ಷಾ ಶುಲ್ಕ ಪಾವತಿಸಲು ಅಧಿಸೂಚನೆ ಹೊರಡಿಸಲಾಗಿದೆ.

ಬಿಎ, ಬಿಕಾಂ, ಬಿಎಡ್, ಬಿಎಡ್ (ವಿಶೇಷ ಶಿಕ್ಷಣ), ಎಂಎ, ಎಂಕಾಂ, ಎಂಬಿಎ, ಎಲ್‍ಎಲ್‍ಎಂ, ಎಂಬಿಎ(ಲಾ), ಎಂಟಿಎಂ, ಎಂಎಡ್, ಎಂಲಿಬ್‍ಐಎಸ್ಸಿ, ಎಲ್ಲಾ ಎಂಸ್ಸಿ, ಮತ್ತು ಎಲ್ಲಾ ಪಿಜಿ ಡಿಪ್ಲೋಮಾ, ಡಿಪ್ಲೋಮಾ ಮತ್ತು ಸರ್ಟಿಫಿಕೇಟ್ ಕೋರ್ಸ್‍ಗಳ ವಿದ್ಯಾರ್ಥಿಗಳಿಗೆ ಆನ್‍ಲೈನ್ ಮೂಲಕ ಪರೀಕ್ಷಾ ಶುಲ್ಕ ಕಟ್ಟಲು ಅವಕಾಶ ಕಲ್ಪಿಸಲಾಗಿದೆ.

ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯದ ಅಧಿಕೃತ ವೆಬ್‍ಸೈಟ್ www.ksoumysuru.ac.in ನಲ್ಲಿ ಅಥವಾ http://ksouportal. com/views/ExamHome.aspx ನ ಮೂಲಕ ಪರೀಕ್ಷಾ ಶುಲ್ಕವನ್ನು ಕಡ್ಡಾಯವಾಗಿ ಅಂತರ್‍ಜಾಲದ (Online) ಮೂಲಕ ಮಾತ್ರ ಪಾವತಿಸುವುದು. ಪರೀಕ್ಷಾ ಶುಲ್ಕ ಪಾವತಿಸಲು ದಂಡ ಶುಲ್ಕವಿಲ್ಲದೆ ಆ.6 ಹಾಗೂ 200ರೂ ದಂಡ ಶುಲ್ಕದೊಂದಿಗೆ ಆ.21ಕಡೆಯ ದಿನಾಂಕವಾಗಿರುತ್ತದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಪ್ರಾದೇಶಿಕ ನಿರ್ದೇಶಕರು, ಕರಾಮುವಿ ಮಹಿಳಾ ಪ್ರಾದೇಶಿಕ ಕೇಂದ್ರ, ಸರಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜು, 4ನೇ ಮುಖ್ಯರಸ್ತೆ, 13ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು-03. ಕಚೇರಿ ದೂ.080 23448811, 9844506629. 9620395584, 7760848564. ಅಥವಾ ಆನಲೈನ್ ಸಹಾಯವಾಣಿ ಸಂಖ್ಯೆ: 8800335638 ಸಂಪರ್ಕಿಸಲು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News