ಜಿಂದಾಲ್ ಸಂಸ್ಥೆಗೆ ಭೂಮಿ ಪರಭಾರೆ: ಸರಕಾರದ ನಿಲುವು ಅಸ್ಪಷ್ಟ, ಆಘಾತಕಾರಿ; ಹೈಕೋರ್ಟ್

Update: 2021-07-14 16:09 GMT

ಬೆಂಗಳೂರು, ಜು.14: ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಜಿಂದಾಲ್ ಸಂಸ್ಥೆಗೆ 3,667 ಎಕರೆ ಜಮೀನು ಪರಭಾರೆ ಮಾಡುವ ಸಂಬಂಧ ಸರಕಾರದ ನಿಲುವು ಅಸ್ಪಷ್ಟ ಮತ್ತು ಆಘಾತಕಾರಿ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಇದೇ ವೇಳೆ, ಸಚಿವ ಸಂಪುಟದ ಒಪ್ಪಿಗೆ ಇಲ್ಲದೆ ಸರಕಾರಿ ಆದೇಶದ ಮೂಲಕವೇ ಭೂಮಿ ಪರಭಾರೆ ಮಾಡಲು ಸಾಧ್ಯವೇ ಎಂಬ ಬಗ್ಗೆ ಸರಕಾರ ತನ್ನ ನಿಲುವು ಸ್ಪಷ್ಟಪಡಿಸುವಂತೆ ನಿರ್ದೇಶಿಸಿದೆ.

ಜಿಂದಾಲ್ ಸಂಸ್ಥೆಗೆ ಜಮೀನು ಪರಭಾರೆ ಮಾಡುವ ಸರಕಾರದ ಕ್ರಮ ಪ್ರಶ್ನಿಸಿ ಬೆಂಗಳೂರಿನ ಕೆ.ಎ.ಪಾಲ್ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಹೈಕೋರ್ಟ್ ನ್ಯಾಯಪೀಠದಲ್ಲಿ ನಡೆಯಿತು.
ವಕೀಲರ ವಾದ ಆಲಿಸಿದ ನ್ಯಾಯಪೀಠ, ಇತ್ತ ಸಚಿವ ಸಂಪುಟದಲ್ಲಿ ಯಾವುದೇ ಅಂತಿಮ ತೀರ್ಮಾನವಾಗಿಲ್ಲ ಎನ್ನುತ್ತೀರಿ, ಮತ್ತೊಂದು ಕಡೆ ಭೂಮಿ ಪರಭಾರೆ ಬಗ್ಗೆಯೂ ಮಾತನಾಡುತ್ತೀರಿ. ಪರಭಾರೆ ವಿಚಾರದಲ್ಲಿ ಸರಕಾರದ ನಿಲುವು ಪಾರದರ್ಶಕವಾಗಿರಬೇಕು. ಆದರೆ, ಸರಕಾರದ ನಿರ್ಧಾರ ಅಸ್ಪಷ್ಟ, ಆಘಾತಕಾರಿಯಾಗಿದೆ. 

ಹೀಗಾಗಿ ಸಚಿವ ಸಂಪುಟದ ಸಮ್ಮತಿಯಿಲ್ಲದೇ, ಸರಕಾರಿ ಆದೇಶದ ಮೂಲಕ ಜಮೀನು ಪರಭಾರೆ ಮಾಡಬಹುದೇ ಎಂಬ ಬಗ್ಗೆ ಸರಕಾರ ತನ್ನ ನಿಲುವು ಸ್ಪಷ್ಟಪಡಿಸಬೇಕು ಎಂದು ಸೂಚಿಸಿ, ವಿಚಾರಣೆಯನ್ನು ಜು.16ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News