ಕೆಆರ್ ಎಸ್ ಡ್ಯಾಂ ಬಿರುಕು ಬಿಟ್ಟಿದೆ ಎಂಬ ಹೇಳಿಕೆ ಸರಿಯಲ್ಲ: ಸಚಿವ ಆರ್.ಅಶೋಕ್

Update: 2021-07-14 17:24 GMT

ಮೈಸೂರು,ಜು.14: ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮಗೆ ವ್ಯಕ್ತಿ ಮುಖ್ಯ ಅಲ್ಲ,  ಕೆಆರ್ ಎಸ್  ಸುತ್ತ ಮುತ್ತ ಗಣಿಗಾರಿಕೆಯಿಂದ ಡ್ಯಾಂ ಬಿರುಕು ಬಿಟ್ಟಿದೆ ಎಂಬ ಹೇಳಿಕೆ ಸರಿಯಲ್ಲ. ಡ್ಯಾಂ ಸುರಕ್ಷತೆ ಬಗ್ಗೆ ಸರ್ಕಾರ ವರದಿ ಕೇಳಿತ್ತು. ಅಧಿಕಾರಿಗಳು ಈ ಸಂಬಂಧ ವರದಿ ನೀಡಿದ್ದಾರೆ ಎಂದು ಹೇಳಿದರು.

 ಕೆಆರ್ ಎಸ್   ಡ್ಯಾಂ ಬಿರುಕು ವಿಚಾರ ಸಂಬಂಧ ಈಗಾಗಲೇ ಮುಖ್ಯಮಂತ್ರಿಗಳು ಆತಂಕ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಟನೆ ನಿಡಿದ್ದಾರೆ. ನಾನು ಮುರುಗೇರ್ಶ ನಿರಾಣಿ ಹೇಳಿಕೆ ಕೊಟ್ಟಿದ್ದೇವೆ. ಅಣೆಕಟ್ಟಿನ ತಳಭಾಗದಲ್ಲಿರುವ ಜನರು ಮತ್ತು ರೈತರಿಗೆ ಆತಂಕ ಉಂಟಾಗುತ್ತದೆ. ಇಷ್ಟೆಲ್ಲಾ ಆಗುತ್ತಿದ್ದರೂ ಸರ್ಕಾರ ಸುಮ್ಮನಿರಲು ಸಾಧ್ಯವಿಲ್ಲ. ನಾನು ಮಂಡ್ಯಕ್ಕೆ ಹೋಗುತ್ತೇನೆ. ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಅವರಿಗೆ ಕೆಆರ್‍ಎಸ್ ಹಾಗೂ ಬೇಬಿ ಬೆಟ್ಟ ಸುತ್ತಾ ಏನಾಗಿದೆ ಎಂದು ವರದಿ ನೀಡುವಂತೆ ಸೂಚಿಸುತ್ತೇನೆ ಎಂದು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News