ಮಳೆಗಾಲದಲ್ಲಿ ಮಡಿಕೇರಿ ಕೋಟೆ ಸುರಕ್ಷತೆ : ನ್ಯಾಯಾಲಯದ ಸೂಚನೆಯಂತೆ ಜಿಲ್ಲಾಧಿಕಾರಿ ಪರಿಶೀಲನೆ
Update: 2021-07-16 16:21 IST
ಮಡಿಕೇರಿ ಜು.16 : ಮಳೆಗಾಲದಲ್ಲಿ ಮಡಿಕೇರಿ ಕೋಟೆ ಸುರಕ್ಷತೆಗಾಗಿ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಪರಿಶೀಲನೆ ನಡೆಸಿದರು.
ಕೋಟೆ ಅಭಿವೃದ್ಧಿಗೆ ಸಂಬಂಧಿಸಿದಂತೆ ರಾಜ್ಯ ಉಚ್ಚನ್ಯಾಲಯದ ಆದೇಶದಂತೆ ಕೋಟೆ ಅಭಿವೃದ್ಧಿ ಕಾಮಗಾರಿ, ಮಳೆಗಾಲದಲ್ಲಿ ಕೈಗೊಂಡಿರುವ ಮುಂಜಾಗೃತಾ ಕ್ರಮಗಳ ಕುರಿತು ಚರ್ಚಿಸಲಾಯಿತು. ಅರ್ಜಿದಾರರ ಸಮ್ಮುಖದಲ್ಲಿ ಪರಿಶೀಲನೆ ನಡೆಸಿ ವರದಿ ನೀಡುವಂತೆ ನ್ಯಾಯಾಲಯ ನೀಡಿದ ಸೂಚನೆಯಂತೆ ಅರ್ಜಿದಾರರಾದ ವಿರುಪಾಕ್ಷಯ್ಯ, ಜಿಲ್ಲಾಧಿಕಾರಿ ಹಾಗೂ ಇತರ ಅಧಿಕಾರಿಗಳು ಪರಿಶೀಲನೆ ನಡೆಸಿದರು.