ರಾಜ್ಯದ ಮೂರು ಕಡೆ ಸೇನಾ ಭರ್ತಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ

Update: 2021-07-16 16:30 GMT

ಬೆಂಗಳೂರು, ಜು.16: ಸೇನಾ ನೇಮಕಾತಿ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ದೈಹಿಕ ಸಾಮರ್ಥ್ಯ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಇ)ಯನ್ನು 2021 ಜುಲೈ 25ರಂದು ರಾಜ್ಯದ ಮೂರು ಸ್ಥಳಗಳಲ್ಲಿ ನಡೆಸಲಾಗುತ್ತಿದೆ.

ಮುಖ್ಯವಾಗಿ ಮಹಿಳಾ ಅಭ್ಯರ್ಥಿಗಳಿಗೆ ಬೆಂಗಳೂರಿನ ಕಾಮ್‍ರಾಜ್ ರಸ್ತೆಯಲ್ಲಿರುವ ಆರ್ಮಿ ಸ್ಕೂಲ್‍ನಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಹಾಗೂ ಮಂಗಳೂರಿನ ಮೂಡಬಿದ್ರಿ ಆಳ್ವಾಸ್ ಸಂಸ್ಥೆ ಮತ್ತು ಬೆಳಗಾವಿಯ ಕೆಎಲ್‍ಇ ಸೊಸೈಟಿಯಲ್ಲಿ ಪರೀಕ್ಷೆ ನಡೆಯಲಿದೆ. 

ಇದಕ್ಕೂ ಮೊದಲು ಎಪ್ರಿಲ್ 25ರಿಂದ ಮೇ 30ರವರೆಗೆ ಈ ಪರೀಕ್ಷೆಗಳನ್ನ ನಡೆಸಲು ಸಮಯ ನಿಗದಿ ಮಾಡಲಾಗಿತ್ತು. ಆದರೆ, ಕೋವಿಡ್ ಹಿನ್ನೆಲೆ ಪರೀಕ್ಷೆ ಮುಂದೂಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News