×
Ad

ರಾಜ್ಯದಲ್ಲಿ ಪೆರೋಲ್ ಮೇಲೆ ಹೊರ ಬಂದಿದ್ದ 11 ಮಂದಿ ನಾಪತ್ತೆ

Update: 2021-07-17 17:50 IST

ಬೆಂಗಳೂರು, ಜು.17: ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಶಿಕ್ಷೆ ಅನುಭವಿಸಿ ಪೆರೋಲ್ ಮೇಲೆ ಹೊರ ಬಂದಿರುವ 11 ಮಂದಿ ಸಜಾ ಬಂಧಿಗಳು 17 ವರ್ಷ ಕಳೆದರೂ ಜೈಲಿಗೂ ಬರದೆ, ಪೊಲೀಸರಿಗೂ ದೊರೆಯದೆ ನಾಪತ್ತೆಯಾಗಿರುವ ಮಾಹಿತಿ ಗೊತ್ತಾಗಿದೆ.

ಇನ್ನು, ಹೊರಬಂದು ನಾಪತ್ತೆಯಾಗಿರುವ 11 ಮಂದಿ ಕೈದಿಗಳನ್ನು ಪೊಲೀಸರು ಹುಡುಕುವ ಕೆಲಸಕ್ಕೇ ಹೋಗದೆ ದಿವ್ಯ ನಿರ್ಲಕ್ಷ್ಯ ತೋರಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ರಾಜಧಾನಿ ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ತುಮಕೂರು ಜಿಲ್ಲಾ ವ್ಯಾಪ್ತಿಗಳಲ್ಲಿ 11ಮಂದಿ  2006 ರಿಂದಲೂ 2019ರವರೆಗೆ ಪೆರೋಲ್ ಮೇಲೆ ಹೊರ ಹೋಗಿದ್ದ ಸಜಾ ಬಂಧಿಗಳ ಪೈಕಿ 11 ಮಂದಿ ಕೈದಿಗಳು ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಸಂಬಂಧ ಜೈಲಾಧಿಕಾರಿಗಳು ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಿದ್ದರೂ, ಪೊಲೀಸರು ಪತ್ತೆ ಹಚ್ಚಿಲ್ಲ. ಇನ್ನು ಈ ಸಂಬಂಧ ಹೈಕೋರ್ಟ್‍ನಲ್ಲಿ ಪಿಐಎಲ್ ಅರ್ಜಿ ಸಲ್ಲಿಕೆ ಯಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ತಲೆಮರೆಸಿಕೊಂಡಿರುವ 11 ಮಂದಿ ಸಜಾಬಂಧಿಗಳನ್ನು ಪತ್ತೆ ಹಚ್ಚುವಂತೆ ಪೊಲೀಸರಿಗೆ ನಿರ್ದೇಶನ ನೀಡಿದ್ದ ಹಿನ್ನೆಲೆಯಲ್ಲಿ ಆಯಾ ಜಿಲ್ಲೆಯ ಪೊಲೀಸರು ನಾಪತ್ತೆಯಾಗಿರುವ ಅಪರಾಧಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News