ಒಕ್ಕಲಿಗರ ಅಭಿವೃದ್ಧಿ ನಿಗಮ ಸ್ಥಾಪಿಸಿ ರಾಜ್ಯ ಸರಕಾರ ಆದೇಶ
Update: 2021-07-17 21:23 IST
ಬೆಂಗಳೂರು, ಜು. 17: 'ರಾಜ್ಯದಲ್ಲಿರುವ ಒಕ್ಕಲಿಗ, ವಕ್ಕಲಿಗ, ಸರ್ಪ ಒಕ್ಕಲಿಗ, ಹಳ್ಳಿಕಾರ್, ನಾಮಧಾರಿ, ಗೌಡ, ಕುಂಚಿಟಿಗ, ದಾಸ್, ಹೆಗಡೆ ಕಮ್ಮ, ಗೌಂಡರ್ ರೆಡ್ಡಿ, ಮರಸು, ಉಪ್ಪಿನ ಕೊಳಗ, ಉತ್ತಮ ಕೊಳಗ ಸಮುದಾಯ ಅಭಿವೃದ್ಧಿಗೆ 'ಒಕ್ಕಲಿಗ ಅಭಿವೃದ್ಧಿ ನಿಗಮ'ವನ್ನು ಸ್ಥಾಪಿಸಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆದೇಶ ಹೊರಡಿಸಲಾಗಿದೆ.
2020-21ರ ಆಯವ್ಯಯದಲ್ಲಿ ಘೋಷಣೆ ಮಾಡಿದಂತೆ ಹಿಂದುಳಿದ ವರ್ಗಗಳ ಪಟ್ಟಿಯ ಪ್ರವರ್ಗ 3'ಎ'ನಲ್ಲಿ ಬರುವ ಮೇಲ್ಕಂಡ ಸಮುದಾಯದ ಅಭಿವೃದ್ಧಿಗೆ ಒಕ್ಕಲಿಗ ಅಭಿವೃದ್ಧಿ ನಿಗಮವನ್ನು ಕಂಪೆನಿ ಕಾಯ್ದೆಯಡಿ ನೋಂದಾಯಿಸಿ ಸ್ಥಾಪಿಸುವುದು, ನಿಗಮಕ್ಕೆ ಪೂರಕ ಹುದ್ದೆಗಳನ್ನು ಸೃಜಿಸುವ ಬಗ್ಗೆ ಪ್ರತ್ಯೇಕ ಆದೇಶ ಹೊರಡಿಸಲಾಗುವುದು ಎಂದು ಇಲಾಖೆ ಅಧೀನ ಕಾರ್ಯದರ್ಶಿ ವಿ.ಅಕ್ಕಮಹಾದೇವಿ ಆದೇಶದಲ್ಲಿ ತಿಳಿಸಿದ್ದಾರೆ.