ದರ್ಶನ್ ಹಲ್ಲೆ ಆರೋಪ: ಸುಮೋಟೊ ಪ್ರಕರಣ ದಾಖಲಿಸಲು ಇಂದ್ರಜಿತ್ ಲಂಕೇಶ್ ಒತ್ತಾಯ
ಬೆಂಗಳೂರು, ಜು.17: ಕಾರ್ಮಿಕನ ಮೇಲೆ ದರ್ಶನ್ ಹಲ್ಲೆ ಆರೋಪ ಪ್ರಕರಣ ಸಂಬಂಧ ನಟ ದರ್ಶನ್ ಹಲ್ಲೆ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರು ಕೂಡಲೇ ಸುಮೋಟೊ ಅಡಿ ಮೊಕದ್ದಮೆ ದಾಖಲಿಸಬೇಕು ಎಂದು ಸಿನೆಮಾ ನಿರ್ದೇಶಕ ಇಂದ್ರಜಿತ್ ಲಂಕೇಶ್ ಒತ್ತಾಯಿಸಿದ್ದಾರೆ.
ಶನಿವಾರ ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರಿಗೆ ತೆರಳಿದ ಬೆನ್ನಲ್ಲೇ ಹೊಟೇಲ್‍ಗೆ ತೆರಳಿದ್ದು ಏಕೆ. ಇದರಿಂದ ಸಾಕ್ಷ್ಯಗಳನ್ನು ನಾಶ ಪಡಿಸುವ ಎಲ್ಲ ಸಾಧ್ಯತೆ ಇದೆ. ಈ ವಿಚಾರದಲ್ಲಿ ಪೊಲೀಸರು ಏಕೆ ಸುಮ್ಮನಿದ್ದಾರೆ ಎಂದು ಪ್ರಶ್ನೆ ಮಾಡಿದರು.
ಆಣೆ ಸವಾಲು: ನೀವು ನಿಮ್ಮ ತಂದೆಗೆ ಹುಟ್ಟಿದ್ದರೆ ಧರ್ಮಸ್ಥಳಕ್ಕೆ ಹೋಗಿ ಆಣೆ ಮಾಡಿ ಎಂದು ಸವಾಲು ಹಾಕಿದ ಅವರು, ದರ್ಶನ್ ಅವರು ವಿಚಲಿತರಾಗಿದ್ದಾರೆ. ಇದು ವಿಚಲಿತರಾಗುವ ಸಂದರ್ಭ ಅಲ್ಲ. ನನ್ನ ಪ್ರಶ್ನೆಗಳಿಗೆ ಉತ್ತರಿಸಿ ಮೊದಲು ಎಂದು ಹೇಳಿದರು.
ಇನ್ನು ನಾನು ಎಲ್ಲಿಯೂ ಸಿನೆಮಾ ಕ್ಷೇತ್ರದ ಗಣ್ಯರ ಶಿಕ್ಷಣ ಕುರಿತು ಪ್ರಸ್ತಾಪ ಮಾಡಿಲ್ಲ. ಅಲ್ಲದೆ, ಗಣ್ಯರು ಇತರರಿಗೆ ಮಾದರಿಯಾಗಬೇಕೆಂದು ಹೇಳಿದ್ದೇನೆ. ನಿಮ್ಮ ನಡವಳಿಕೆ, ಮಾತುಗಳು ಸರಿಯಾಗಿರಬೇಕು ಎಂದಿದ್ದೇನೆ ಎಂದು ಇಂದ್ರಜಿತ್ ಹೇಳಿದರು.
ನಾನು ಮಾತನಾಡುವಾಗ ಗಾಂಡುಗಿರಿ ಅಂದಿಲ್ಲ, ಗೂಂಡಾಗಿರಿ ಅಂದಿದ್ದೇನೆ. ಹಾಗೆಯೇ ಮಾತಿನಲ್ಲಿ ಸಭ್ಯತೆ, ಸಂಸ್ಕಾರ ಇರಲಿ, ಇರುವಂತಹವರು ಎಜುಕೇಟೆಡ್ ಎಂದಿದ್ದೇನೆ ಹೊರತು, ಅವಿದ್ಯಾವಂತರು ಎಂದಿಲ್ಲ. ಮತ್ತೆ, ಆ ಆಡಿಯೋ, ಅದನ್ನು ನಾನು ತನಿಖಾ ತಂಡಕ್ಕೆ, ಪೊಲೀಸರಿಗೆ ಕೊಡುತ್ತೇನೆ. ಅದನ್ನು ಇಲ್ಲಿ ಬಿಡುಗಡೆ ಮಾಡುವ ಅಗತ್ಯವಿಲ್ಲ.
-ಇಂದ್ರಜಿತ್ ಲಂಕೇಶ್, ನಿರ್ದೇಶಕ