ಅಧಿವೇಶನ ಕರೆಯದಿದ್ದರೆ ಸುವರ್ಣಸೌಧ ಕಟ್ಟಡ ಬಾಡಿಗೆಗೆ ಕೊಡಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

Update: 2021-07-18 15:07 GMT

ಬಾಗಲಕೋಟೆ, ಜು. 18: `ರಾಜ್ಯದ ಗಡಿ ಜಿಲ್ಲೆ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ ನಡೆಸದಿದ್ದರೆ, ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿರುವ ಸುವರ್ಣವಿಧಾನಸೌಧ ಕಟ್ಟಡವನ್ನು ಬಾಡಿಗೆಗೆ ಕೊಡಲಿ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರವಿವಾರ ಜಿಲ್ಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ರಾಜ್ಯ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ವಿವಿಧ ನೆಪದಲ್ಲಿ ಬೆಳಗಾವಿಯಲ್ಲಿ ಅಧಿವೇಶನವನ್ನು ಕರೆದಿಲ್ಲ. ಹೀಗಾಗಿ ಸುವರ್ಣ ಸೌಧದಲ್ಲಿನ ಟೇಬಲ್, ಕುರ್ಚಿಗಳನ್ನು ಹೆಗ್ಗಣ ತಿನ್ನುತ್ತಿವೆ. ಇದು ಉತ್ತರ ಕರ್ನಾಟಕದ ಬಗ್ಗೆ ಈ ಸರಕಾರಕ್ಕೆ ಇರುವ ನಿರ್ಲಕ್ಷ್ಯ ಧೋರಣೆಗೆ ಇದೇ ಸಾಕ್ಷಿ' ಎಂದು ವಾಗ್ದಾಳಿ ನಡೆಸಿದರು. 

`ಮಗು ಆಗುತ್ತೆ ಎಂದು ಅವರಿಗೂ ಗೊತ್ತಾಗಿದೆ. ಅಂದರೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಗೊತ್ತಾಗಿದೆ. ಬಹಳ ಸಂತೋಷದ ವಿಚಾರ. ಡಿಸಿಎಂ ಕಾರಜೋಳ ಅವರನ್ನು ಅಭಿನಂದಿಸುತ್ತೇವೆ' ಎಂದು ಡಿ.ಕೆ.ಶಿವಕುಮಾರ್, ಕಾರಜೋಳ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News