ಯಾದಗಿರಿ: ಸಾಲ ಬಾಧೆಗೆ ಯುವ ರೈತ ಆತ್ಮಹತ್ಯೆ
Update: 2021-07-18 22:46 IST
ಯಾದಗಿರಿ,ಜು.18: ಸಾಲಬಾಧೆ ತಾಳಲಾರದೆ ಯುವ ರೈತನೊಬ್ಬ ನೇಣಿಗೆ ಶರಣಾದ ಘಟನೆ ನಡೆದಿದೆ.
ಸುರಪುರ ತಾಲೂಕಿನ ಸಿದ್ದಾಪುರ ಗ್ರಾಮದ ನಿಂಗಪ್ಪ ತಮ್ಮಣ್ಣ ಕಮತಗಿ (31 ವರ್ಷ) ಆತ್ಮಹತ್ಯೆ ಮಾಡಿಕೊಂಡಿರುವ ರೈತ ಎಂದು ತಿಳಿದು ಬಂದಿದೆ .
ಮೃತ ರೈತ ನಿಂಗಪ್ಪ ಕಮತಗಿ ಅವರಿಗೆ 13 ಎಕರೆ ಜಮೀನು ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.ಸುರಪುರ ನಗರದ ಬ್ಯಾಂಕ್ ಒಂದರಲ್ಲಿ 6 ಲಕ್ಷ 60 ಸಾವಿರ ರೂ. ಹಾಗೂ ಇತರರಿಂದ 4 ಲಕ್ಷ ರೂ. ಸಾಲ ಮಾಡಿಕೊಂಡಿದ್ದ ಎಂದು ಹೇಳಲಾಗುತ್ತಿದೆ.
ಕಳೆದ ಕೆಲ ವರ್ಷಗಳಿಂದ ಸರಿಯಾಗಿ ಬೆಳೆ ಕೈಗೆ ಬಾರದೆ ಕೃಷಿಯಲ್ಲಿ ನಷ್ಟಹೊಂದಿದ್ದ, ಇದರಿಂದ ತೀವ್ರ ನೊಂದಿದ್ದ ರೈತರ ಸಾಲ ತೀರಿಸಲಾಗದೆ ರವಿವಾರ ಬೆಳಿಗೆ ತಮ್ಮ ಪಕ್ಕದ ಜಮೀನಿನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಈ ಕುರಿತು ಸುರಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.