ಕೆಆರ್ ಎಸ್ ವ್ಯಾಪ್ತಿ ಗಣಿಗಾರಿಕೆ ನಿಷೇಧಕ್ಕೆ ಒತ್ತಾಯ: ಸಂಸದೆ ಸುಮಲತಾರಿಂದ ಕೇಂದ್ರ ಸಚಿವರಿಗೆ ಮನವಿ

Update: 2021-07-20 16:23 GMT

ಮಂಡ್ಯ, ಜು.20: ಜಿಲ್ಲೆಯ ಕೆಕೆಆರ್ ಎಸ್ ಜಲಾಶಯದ 20 ಕಿ.ಮೀ. ವ್ಯಾಪ್ತಿಯ ಎಲ್ಲಾ ರೀತಿಯ ಗಣಿಗಾರಿಕೆಯನ್ನು ಶಾಶ್ವತ ನಿಷೇಧಿಸುವಂತೆ ಕ್ರಮವಹಿಸಬೇಕು ಎಂದು ಸಂಸದೆ ಸುಮಲತಾ ಅಂಬರೀಶ್ ಕೇಂದ್ರ ಗಣಿ ಸಚಿವ ಪ್ರಹ್ಲಾದ್ ಜೋಷಿ ಮತ್ತು ಜಲಶಕ್ತಿ ಸಚಿವ ಗಜೇಂದ್ರಸಿಂಗ್ ಶೆಖಾವತ್ ಅವರನ್ನು ಒತ್ತಾಯಿಸಿದ್ದಾರೆ.

ಮಂಗಳವಾರ ಸಚಿವರಿಗೆ ಮನವಿ ಪತ್ರ ಸಲ್ಲಿಸಿರುವ ಸುಮಲತಾ, ಜಲಾಶಯ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಲ್ಲುಗಣಿಗಾರಿಕೆಯಿಂದ ಜಲಾಶಯಕ್ಕೆ ಅಪಾಯವಿರುವ ಬಗ್ಗೆ ವರದಿಗಳಿವೆ. ಆದರೂ, ಗಣಿಗಾರಿಕೆ ನಡೆಯುತ್ತಿದೆ. ಜಲಾಶಯ ರಕ್ಷಣೆ ದೃಷ್ಟಿಯಿಂದ ಗಣಿಗಾರಿಕೆ ನಿಷೇಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಇದಲ್ಲದೆ, ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆಯಿಂದ ಸರಕಾರಕ್ಕೆ ಬರಬೇಕಾದ ರಾಜಧನ ವಂಚನೆಯಾಗುತ್ತಿದೆ. ಅನೇಕ ಅಧಿಕೃತ ಗಣಿ ಮಾಲಕರಿಂದಲೂ ರಾಜಧನ ವಸೂಲಿಯಾಗುತ್ತಿಲ್ಲ. ಸುಮಾರು 2 ಸಾವಿರ ಕೋಟಿ ರೂ. ರಾಜಧನ ಬರಬೇಕಾಗಿದ್ದು, ಅದರ ವಸೂಲಿಗೂ ಕ್ರಮವಹಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News