ಮಾಂಸ ಕೊಂಡೊಯ್ಯುತ್ತಿದ್ದ ಆರೋಪದಲ್ಲಿ ಯುವಕನಿಗೆ ಹಲ್ಲೆ : ಹಲವರ ವಿರುದ್ಧ ಪ್ರಕರಣ ದಾಖಲು
Update: 2021-07-22 13:42 IST
ಮಡಿಕೇರಿ : ಆಟೋ ರಿಕ್ಷಾದಲ್ಲಿ ಸುಮಾರು 2 ಕೆಜಿ ಗೋಮಾಂಸ ಕೊಂಡೊಯ್ಯುತ್ತಿದ್ದ ಆರೋಪದಲ್ಲಿ ಯುವಕನೋರ್ವನಿಗೆ ಪರಿವಾರದವರು ಎಂದು ಹೇಳಿಕೊಂಡ ತಂಡವೊಂದು ಹಲ್ಲೆ ನಡೆಸಿದ್ದು, ಈ ಬಗ್ಗೆ ಹಲವರ ವಿರುದ್ಧ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಸುನೀಲ್, ಮನು, ಮಂಜು, ವಿನು ಮತ್ತಿತರರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಸುಂಟಿಕೊಪ್ಪ ಸಮೀಪ ಗರಗಂದೂರು ಗ್ರಾಮದಲ್ಲಿ ಆಟೋ ಚಾಲಕ ಎಂ.ರಶೀದ್ ಎಂಬವರಿಗೆ ಸಂಘ ಪರಿವಾರದವರು ಎಂದು ಹೇಳಿಕೊಂಡ ಗುಂಪೊಂದು ಜು.20 ರಂದು ಹಲ್ಲೆ ನಡೆಸಿ, ಗೋಮಾಂಸ ಕೊಂಡೊಯ್ಯುತ್ತಿರುವ ಬಗ್ಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಕೊಲೆ ಬೆದರಿಕೆ ಯೊಡ್ಡಿದ್ದಾರೆ ಎಂದು ದೂರು ನೀಡಲಾಗಿತ್ತು.